ADVERTISEMENT

ಬೀದರ್: ಸಾರ್ವಜನಿಕರ ರಕ್ಷಣೆ ಪೊಲೀಸರ ಕರ್ತವ್ಯ

​ಪ್ರಜಾವಾಣಿ ವಾರ್ತೆ
Published 9 ಜನವರಿ 2022, 6:42 IST
Last Updated 9 ಜನವರಿ 2022, 6:42 IST
ಬೀದರ್‌ನ ನಗರ ಪೊಲೀಸ್‌ ಠಾಣೆ ಆವರಣದಲ್ಲಿ ನಡೆದ ತೆರೆದ ಮನೆ ಕಾರ್ಯಕ್ರಮದಲ್ಲಿ ಪಿಎಸ್‌ಐ ಪ್ರಭಾಕರ ಪಾಟೀಲ ಮಾತನಾಡಿದರು
ಬೀದರ್‌ನ ನಗರ ಪೊಲೀಸ್‌ ಠಾಣೆ ಆವರಣದಲ್ಲಿ ನಡೆದ ತೆರೆದ ಮನೆ ಕಾರ್ಯಕ್ರಮದಲ್ಲಿ ಪಿಎಸ್‌ಐ ಪ್ರಭಾಕರ ಪಾಟೀಲ ಮಾತನಾಡಿದರು   

ಬೀದರ್: ‘ಸಾರ್ವಜನಿಕರ ರಕ್ಷಣೆ ಹಾಗೂ ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡುವುದೇ ಪೊಲೀಸರ ಕರ್ತವ್ಯವಾಗಿದೆ’ ಎಂದು ಪ್ರಭಾಕರ ಪಾಟೀಲ ಹೇಳಿದರು.

ಮಕ್ಕಳ ಸಹಾಯವಾಣಿ ಹಾಗೂ ಡಾನ್ ಬೋಸ್ಕೊ ಸಂಸ್ಥೆಯ ವತಿಯಿಂದ ನಗರದ ಚೌಬಾರಾ ಸಮೀಪದ ನಗರ ಪೊಲೀಸ್‌ ಠಾಣೆಯಲ್ಲಿ ತೆರೆದ ಮನೆ ಕಾರ್ಯಕ್ರಮ ನಡೆಯಿತು.

ಮಕ್ಕಳ ಸಹಾಯವಾಣಿ ಸದಸ್ಯ ಜಾನ್ಸನ್ ಕರಂಜಿಕರ್ ಮಾತನಾಡಿ, ‘ಶಾಲಾ ಮಕ್ಕಳನ್ನು ಪೊಲೀಸ್‌ ಠಾಣೆಗೆ ಕರೆ ತಂದು ಪೊಲೀಸ್‌ ಇಲಾಖೆಯ ಮಾಹಿತಿ ನೀಡುವುದು ತೆರೆದ ಮನೆ ಕಾರ್ಯಕ್ರಮದ ಉದ್ದೇಶವಾಗಿದೆ’ ಎಂದರು.

ADVERTISEMENT

ಸಮೂಹ ಸಮನ್ವಯ ಅಧಿಕಾರಿ ವಿಜಯಕುಮಾರ ಬೆಳಮಗಿ, ಅವಿನಾಶ ಬೇವಿನದೊಡ್ಡಿ ಮಾತನಾಡಿದರು, ಗುರಯ್ಯ ಬಚ್ಚಾ ಪ್ರೌಢ ಶಾಲೆ ಮುಖ್ಯ ಶಿಕ್ಷಕ ಪ್ರಹ್ಲಾದ್ ಝೆರೆಪ್ಪ, ಗಾಂಧಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರಮೇಶ ಕಲ್ಲಪ್ಪ ಚಿಲ್ಲರ್ಗಿ, ಮಕ್ಕಳ ಪ್ರತಿನಿಧಿ ಶ್ರಾವಣಿ, ನಿಖಿಲ್ ಅಶೋಕ ಇದ್ದರು. ಡ್ಯಾನಿಯಲ್ ಮೇತ್ರೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.