ADVERTISEMENT

ಜನವಾಡ | ರೈತರ ಆತ್ಮಹತ್ಯೆ: ಪರಿಹಾರ ವಿತರಣೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2025, 15:47 IST
Last Updated 23 ಜೂನ್ 2025, 15:47 IST
ಆತ್ಮಹತ್ಯೆ ಮಾಡಿಕೊಂಡ ಹಾಗೂ ಹಾವು ಕಡಿತದಿಂದ ಮೃತಪಟ್ಟ ರೈತರ ಕುಟುಂಬಗಳಿಗೆ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಬೀದರ್‌ನ ತಮ್ಮ ಕಚೇರಿಯಲ್ಲಿ ಸೋಮವಾರ ಪರಿಹಾರ ಧನದ ಮಾಹಿತಿ ಪತ್ರ ವಿತರಿಸಿದರು
ಆತ್ಮಹತ್ಯೆ ಮಾಡಿಕೊಂಡ ಹಾಗೂ ಹಾವು ಕಡಿತದಿಂದ ಮೃತಪಟ್ಟ ರೈತರ ಕುಟುಂಬಗಳಿಗೆ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಬೀದರ್‌ನ ತಮ್ಮ ಕಚೇರಿಯಲ್ಲಿ ಸೋಮವಾರ ಪರಿಹಾರ ಧನದ ಮಾಹಿತಿ ಪತ್ರ ವಿತರಿಸಿದರು   

ಜನವಾಡ: ‘ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ಹಾಗೂ ಹಾವು ಕಡಿದು ಮೃತಪಟ್ಟ ಬೀದರ್ ದಕ್ಷಿಣ ಮತಕ್ಷೇತ್ರದ ವಿವಿಧ ಗ್ರಾಮಗಳ ರೈತರ ಕುಟುಂಬಗಳಿಗೆ ಸರ್ಕಾರ ಪರಿಹಾರ ಧನ ಬಿಡುಗಡೆ ಮಾಡಿದೆ.

ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅವರು ಬೀದರ್‌ನ ತಮ್ಮ ಕಚೇರಿಯಲ್ಲಿ ಸೋಮವಾರ ಹೊನ್ನಡ್ಡಿಯ ರೈತ ನಾಗಶೆಟ್ಟಿ ವಿಠ್ಠಲ, ಕಪಲಾಪುರದ ಶಿವಕುಮಾರ ಸಂಗಣ್ಣ, ಘೋಡಂಪಳ್ಳಿಯ ಮಲ್ಲಪ್ಪ ನಾಗಣ್ಣ, ಸಂಗೋಳಗಿ ತಾಂಡಾದ ಶಿವಾಜಿ ರಾವಜಿ, ಮರ್ಜಾಪುರ(ಎಂ)ದ ಸುಭಾಷ್ ಮಾರುತಿ, ಅಷ್ಟೂರಿನ ತುಕಾರಾಮ ಮಾಣಿಕ ಅವರ ಕುಟುಂಬಗಳಿಗೆ ತಲಾ ₹5 ಲಕ್ಷ ಹಾಗೂ ಹಾವು ಕಡಿದು ಮೃತಪಟ್ಟ ಜಮಿಸ್ತಾನಪುರದ ಎಂ.ಡಿ.ಅಯಾನ್ ಅವರ ಕುಟುಂಬಕ್ಕೆ ₹2 ಲಕ್ಷ ಪರಿಹಾರ ಧನದ ಮಾಹಿತಿ ಪತ್ರ ವಿತರಿಸಿದರು.

‘ಕ್ಷೇತ್ರದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ತ್ವರಿತವಾಗಿ ಪರಿಹಾರ ದೊರಕಿಸಿಕೊಡಲಾಗಿದೆ. ಆತ್ಮಹತ್ಯೆ ಯಾವುದಕ್ಕೂ ಪರಿಹಾರ ಅಲ್ಲ. ರೈತರು ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಬೇಕು. ಆತ್ಮಹತ್ಯೆಗೆ ಶರಣಾಗಬಾರದು’ ಎಂದು ಮನವಿ ಮಾಡಿದರು.

ADVERTISEMENT

ಕೃಷಿ ಇಲಾಖೆಯ ಉಪ ನಿರ್ದೇಶಕ ಎಂ.ಎ.ಕೆ.ಅನ್ಸಾರಿ, ಕೃಷಿ ಅಧಿಕಾರಿಗಳಾದ ಸಂತೋಷ ಪಾಟೀಲ, ಸತೀಶ ಶೆಟಕಾರ, ಪ್ರಮುಖರಾದ ಹಣಮತರಾವ ಮೈಲಾರೆ, ಸಂಜುಕುಮಾರ ರೆಡ್ಡಿ, ಸಂತೋಷ ರೆಡ್ಡಿ, ಘಾಳೆಪ್ಪ ಚಟ್ನಳ್ಳಿ, ಶಿವಕುಮಾರ ಕಪಲಾಪುರೆ, ರವಿಕುಮಾರ ಬಾಲೆಬಾಯಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.