ADVERTISEMENT

ಜೆಇಇ ಮೇನ್ಸ್: ಜ್ಞಾನಸುಧಾ ವಿದ್ಯಾರ್ಥಿಗೆ ಶೇ 99.75 ಅಂಕ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 15:45 IST
Last Updated 28 ಏಪ್ರಿಲ್ 2025, 15:45 IST
ನೀಲಭ್ ದುಬೆ
ನೀಲಭ್ ದುಬೆ   

ಮಾಮನಕೇರಿ(ಜನವಾಡ): ಪ್ರಸಕ್ತ ಸಾಲಿನ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಬೀದರ್ ತಾಲ್ಲೂಕಿನ ಮಾಮನಕೇರಿ ಸಮೀಪದ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ನೀಲಭ್ ರಾಜೇಶಕುಮಾರ ದುಬೆ ಶೇ 99.75 ರಷ್ಟು ಅಂಕ ಗಳಿಸಿ ಸಾಧನೆ ಮಾಡಿದ್ದಾರೆ.

ರಿತೇಶ್ ಪಂಡಿತ 3,568ನೇ ರ‍್ಯಾಂಕ್‌, ಕೃಷ್ಣ ಕಿರಣ 3,568ನೇ ರ‍್ಯಾಂಕ್‌, ಜಯಪ್ರಕಾಶ ನಾಗೇಂದ್ರ 3,880ನೇ ರ‍್ಯಾಂಕ್‌, ಸುಮೀತ್ ಶರದಕುಮಾರ 7,941ನೇ ರ‍್ಯಾಂಕ್‌, ಶ್ರೀಕಾಂತ ಬಾಬುರಾವ್ 8,101ನೇ ರ‍್ಯಾಂಕ್‌, ಭಗವಾನ್ 9,000ನೇ ರ‍್ಯಾಂಕ್‌ ಸೇರಿ ಕಾಲೇಜಿನ ಒಟ್ಟು 30 ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಎನ್ಐಟಿ ಕಾಲೇಜುಗಳಲ್ಲಿ ಪ್ರವೇಶಕ್ಕೆ ಅರ್ಹತೆ ಗಳಿಸಿದ್ದಾರೆ ಎಂದು ಕಾಲೇಜು ಪ್ರಾಚಾರ್ಯ ಚನ್ನವೀರ ಪಾಟೀಲ ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಪೂರ್ಣಿಮಾ ಜಿ. ಹಾಗೂ ನಿರ್ದೇಶಕ ಮುನೇಶ್ವರ ಲಾಖಾ ಸಂತಸ ವ್ಯಕ್ತಪಡಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.