ADVERTISEMENT

ಕಲಬುರ್ಗಿ ನಗರಕ್ಕೆ ತಂಪೆರೆದ ಮಳೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2021, 3:04 IST
Last Updated 10 ಏಪ್ರಿಲ್ 2021, 3:04 IST
ಕಲಬುರ್ಗಿಯಲ್ಲಿ ಶುಕ್ರವಾರ ಮಧ್ಯಾಹ್ನ ಏಕಾಏಕಿ ಸುರಿದ ತುಂತುರು ಮಳೆಯಲ್ಲಿ ತೋಯಿಸಿಕೊಂಡೇ ಬೈಕ್‌ ಸವಾರಿ ಮಾಡಿದ ಯುವತಿಯರು
ಕಲಬುರ್ಗಿಯಲ್ಲಿ ಶುಕ್ರವಾರ ಮಧ್ಯಾಹ್ನ ಏಕಾಏಕಿ ಸುರಿದ ತುಂತುರು ಮಳೆಯಲ್ಲಿ ತೋಯಿಸಿಕೊಂಡೇ ಬೈಕ್‌ ಸವಾರಿ ಮಾಡಿದ ಯುವತಿಯರು   

ಕಲಬುರ್ಗಿ: ನಗರವೂ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಶುಕ್ರವಾರ ಮಧ್ಯಾಹ್ನ ಅರ್ಧ ಗಂಟೆಗೂ ಹೆಚ್ಚು ತುಂತುರು ಮಳೆ ಸುರಿಯಿತು.

ಬೆಳಿಗ್ಗೆ 10ರಿಂದಲೇ ಬಿಸಿಲಿನ ತಾಪ ಹೆಚ್ಚಾಗಿತ್ತು. ಆದರೆ, ಮಧ್ಯಾಹ್ನ 2ರ ಸುಮಾರಿಗೆ ಮೋಡ ಕವಿದು, 3 ಗಂಟೆ ಸುಮಾರಿಗೆ ಮಳೆ ಸುರಿಯಲಾರಂಭಿಸಿತು. ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯ‍ ಪ್ರದೇಶ, ಹೈಕೋರ್ಟ್‌ ಪ್ರದೇಶ, ಶಕ್ತಿನಗರ, ಶಾಸ್ತ್ರೀನಗರ, ಮಹಾವೀರ ನಗರ, ವೆಂಕಟೇಶ್ವರ ನಗರ, ಜಿಲ್ಲಾಧಿಕಾರಿ ಕಚೇರಿ, ಬಸ್‌ ನಿಲ್ದಾಣ ‍ಪ್ರದೇಶ ಸೇರಿದಂತೆ ನಗರದ ಹೊರವಲಯದಲ್ಲೂ ಅಲ್ಲಲ್ಲಿ ತುಂತುರು ಉದುರಿತು.

ಕಳೆದ ಒಂದು ವಾರದಿಂದ ನಗರದ ಗರಿಷ್ಠ ಉಷ್ಣಾಂಶ 40ರಿಂದ 42 ಡಿಗ್ರಿ ಸೆಲ್ಸಿಯಸ್‌ ದಾಟಿದೆ. ಬಿಸಿಲಿನ ತಾಪಕ್ಕೆ ತತ್ತರಿಸಿದ ಜನರಿಗೆ ಶುಕ್ರವಾರ ಸುರಿದ ಮಳೆ ತುಸು ತಂಪೆರೆಯಿತು. ರಾತ್ರಿ 8ರವರೆಗೂ ಮೋಡ ಕವಿದ ವಾತಾವರಣ ಮುಂದುವರಿದಿತ್ತು.

ADVERTISEMENT

ತುಂತುರು ಮಳೆ

ಕಾಳಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ಶುಕ್ರವಾರ ಮಧ್ಯಾಹ್ನ ಗಾಳಿ, ಗುಡುಗು ಸಹಿತ ತುಂತುರು ಮಳೆ ಸುರಿಯಿತು.

ಕಲಗುರ್ತಿ, ಮಲಘಾಣ, ಡೊಣ್ಣೂರ, ಬೆಣ್ಣೂರ, ಕಣಸೂರ ಸೇರಿದಂತೆ ಕೆಲ ಗ್ರಾಮಗಳಲ್ಲಿ ಒಂದು ತಾಸಿನವರೆಗೂ ಗುಡಗುಮಿಂಚು ಸಹಿತ ಜಿಟಿಜಿಟಿ ಮಳೆ ಸುರಿದಿದೆ.

ಹಲವು ಗ್ರಾಮಗಳಲ್ಲಿ ಕೆಲಹೊತ್ತು ಮಳೆ ಸುರಿಯಿತು. ಮಲಘಾಣ-ಕಾಳಗಿ ನಡುವಿನ ರಸ್ತೆ ಮಧ್ಯೆ ಮಲಘಾಣ ಸೇತುವೆ ಬಳಿ ರಸ್ತೆ ದುರಸ್ತಿ ಕಾರ್ಯ ನಡೆಯುತ್ತಿದೆ. ಮಳೆ ಬಂದು ಇಲ್ಲಿ ಕೆಸರಾಗಿದ್ದರಿಂದ ಸವಾರರು ಪರದಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.