ADVERTISEMENT

ಉದ್ಯಮಶೀಲತಾಭಿವೃದ್ಧಿ ತರಬೇತಿಗಾಗಿ ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 12 ಜೂನ್ 2025, 16:11 IST
Last Updated 12 ಜೂನ್ 2025, 16:11 IST

ಬೀದರ್: ಕೌಶಲಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಪ್ರಾಯೋಜಕತ್ವದಲ್ಲಿ ಬೀದರ್‌ನ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರದಿಂದ (ಸಿಡಾಕ್) ಸ್ವಯಂ ಉದ್ಯೋಗ ಪ್ರಾರಂಭಿಸಲು ಆಸಕ್ತಿಯುಳ್ಳ ಎಲ್ಲಾ ವರ್ಗದ ಪುರುಷರು ಹಾಗೂ ಮಹಿಳೆಯರಿಗೆ 10 ದಿನಗಳ ಉದ್ಯಮಶೀಲತಾಭಿವೃದ್ಧಿ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಸಿಡಾಕ್ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

18ರಿಂದ 50 ವರ್ಷದೊಳಗಿನ ಎಸ್‍ಎಸ್‍ಎಲ್‍ಸಿ ಉತ್ತೀರ್ಣರಾದವರು ಜೂನ್‌ 21ರೊಳಗೆ ತಮ್ಮ ಹೆಸರು ನೋಂದಾಯಿಸಿ ತರಬೇತಿಯಲ್ಲಿ ಭಾಗವಹಿಸಬಹುದು. ಮಾಹಿತಿಗೆ ಮೊ.ಸಂ.: 97430 12315ಗೆ ಸಂಪರ್ಕಿಸಲು ಕೋರಿದ್ದಾರೆ.

ವಿದ್ಯುತ್ ವ್ಯತ್ಯಯ ಇಂದು, ನಾಳೆ 

ADVERTISEMENT

ಬೀದರ್: ಚಿದ್ರಿ ಉಪ ಕೇಂದ್ರದಿಂದ ಸರಬರಾಜು ಆಗುವ ಫೀಡರ್‌ ಮೇಲೆ ತುರ್ತು ನಿರ್ವಹಣಾ ಕಾರ್ಯ ಇರುವುದರಿಂದ 11 ಕೆವಿ ಫೀಡರ್‌ಗಳಾದ 11 ಕೆವಿ ಗುಂಪಾ, ಮೈಲೂರ್, ನಿಸರ್ಗಾ, ಬಸವನಗರ, ಕೆಇಬಿ ಕ್ವಾರ್ಟರ್ಸ್‌ ಫೀಡರ್‌ ವ್ಯಾಪ್ತಿಯ ಗುಂಪಾ, ಚಿಟ್ಟಾ ರೋಡ್‌, ಅಮಲಾಪುರ ರೋಡ್‌, ನಿಸರ್ಗಾ ಲೇಔಟ್, ಕೆಇಬಿ ಕಾಲೊನಿ, ಹಳೆಯ ಮೈಲೂರ್, ಸಿದ್ದರಾಮಯ್ಯ ಲೇಔಟ್, ಗಾಂಧಿನಗರ, ವಿದ್ಯಾನಗರ, ಬಿದ್ರಿ ಕಾಲೊನಿ, ಸಾಯಿ ನಗರ, ಕುಂಬಾರವಾಡ, ಗಣೇಶ ನಗರ, ಮೃತಂಜ್ಯಯ ನಗರ, ಗುಂಪಾ ರಿಂಗ್‌ ರೋಡ್‌, ಬಸವನಗರ ಟೀಚರ್ಸ್‌ ಕಾಲೊನಿ, ಶ್ರೀನಗರ, ಸಂಗಮೇಶ್ವರ ಕಾಲೊನಿ, ಅಗ್ರಿಕಲ್ಚರ್ ಕಾಲೊನಿಗಳಲ್ಲಿ ಜೂನ್‌ 13 ಹಾಗೂ 14ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ಬೀದರ್‌ ವಿಭಾಗದ ಜೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್‌ ಪ್ರಕಟಣೆಯಲ್ಲಿ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.