ADVERTISEMENT

ಕಾನ್ಶಿರಾಂ ಪರಿನಿರ್ವಾಣ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2021, 15:44 IST
Last Updated 9 ಅಕ್ಟೋಬರ್ 2021, 15:44 IST
ಬೀದರ್‌ನ ಹೊಟೇಲ್ ಬರೀದ್‍ಶಾಹಿಯಲ್ಲಿ ನಡೆದ ಬಹುಜನ ಸಮಾಜ ಪಕ್ಷದ ಸಂಸ್ಥಾಪಕ ಕಾನ್ಶಿರಾಂ ಅವರ ಮಹಾ ಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ತಿಪ್ಪಣ್ಣ ವಾಲಿ, ರಾಜಕುಮಾರ ಸಿಂಧೆ, ಅಶೋಕ ಮಂಠಾಳಕರ್, ಎಂ.ಡಿ. ಜಮೀಲ್ ಅಹಮ್ಮದ್ ಖಾನ್, ದತ್ತು ಸೂರ್ಯವಂಶಿ, ಅಂಕುಶ ಗೋಖಲೆ, ಜ್ಞಾನೇಶ್ವರ ಸಿಂಗಾರೆ, ಜಾಫರ್ ಖುರೇಶಿ, ಶಕ್ತಿಕಾಂತ ಲಕ್ಷ್ಮಿದೊಡ್ಡಿ, ಸತ್ಯದೀಪ ಹಾವನೂರ ಇದ್ದರು

ಬೀದರ್: ಬಹುಜನ ಸಮಾಜ ಪಕ್ಷದ ಜಿಲ್ಲಾ ಘಟಕದ ವತಿಯಿಂದ ನಗರದ ಹೊಟೇಲ್ ಬರೀದ್‍ಶಾಹಿಯಲ್ಲಿ ಬಹುಜನ ಸಮಾಜ ಪಕ್ಷದ ಸಂಸ್ಥಾಪಕ ಕಾನ್ಶಿರಾಂ ಅವರ 15ನೇ ಮಹಾ ಪರಿನಿರ್ವಾಣ ದಿನ ಆಚರಿಸಲಾಯಿತು.

ಅಸೃಷ್ಟ್ಯರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರನ್ನು ಆಳುವ ವರ್ಗದವರನ್ನಾಗಿ ಮಾಡಿದ ಶ್ರೇಯಸ್ಸು ಕಾನ್ಶಿರಾಂ ಅವರಿಗೆ ಸಲ್ಲುತ್ತದೆ ಎಂದು ಪಕ್ಷದ ರಾಜ್ಯ ಘಟಕದ ಕಾರ್ಯದರ್ಶಿ ಅಂಕುಶ ಗೋಖಲೆ ನುಡಿದರು.

ಮಾಯಾವತಿ ಅವರನ್ನು ಮೂರು ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿದ್ದರು. ಉತ್ತರ ಪ್ರದೇಶದಲ್ಲಿ ಬಡವರಿಗೆ ಭೂಮಿ, ಬ್ಯಾಂಕ್‍ನಿಂದ ಸಾಲ ಸೌಲಭ್ಯ ಕಲ್ಪಿಸಿದ್ದರು ಎಂದು ಸ್ಮರಿಸಿದರು.

ADVERTISEMENT

ಜಿಲ್ಲಾ ಉಸ್ತುವಾರಿ ದತ್ತು ಸೂರ್ಯವಂಶಿ, ಜಿಲ್ಲಾ ಘಟಕದ ಅಧ್ಯಕ್ಷ ಎಂ.ಡಿ. ಜಮೀಲ್ ಅಹಮ್ಮದ್ ಖಾನ್, ಉಪಾಧ್ಯಕ್ಷ ಅಶೋಕ ಮಂಠಾಳಕರ್, ಪ್ರಧಾನ ಕಾರ್ಯದರ್ಶಿ ತಿಪ್ಪಣ್ಣ ಎಸ್. ವಾಲಿ, ಕಾರ್ಯದರ್ಶಿಗಳಾದ ರಾಜಕುಮಾರ ಸಿಂಧೆ, ಜ್ಞಾನೇಶ್ವರ ಸಿಂಗಾರೆ, ಕಚೇರಿ ಕಾರ್ಯದರ್ಶಿ ಜಾಫರ್ ಖುರೇಶಿ, ಸತ್ಯದೀಪ ಹಾವನೂರ, ಶಕ್ತಿಕಾಂತ ಲಕ್ಷ್ಮಿದೊಡ್ಡಿ, ದತ್ತು ಭಂಡಾರೆ, ಮಹೇಶ ಮೈಲೂರ, ರಾಘವೇಂದ್ರ ಗೋರಟೆ, ಶೇಖ ಮಹೆಮೂದ್, ಬಾಬಾ ಮದರಗಿ ಉಪಸ್ಥಿತರಿದ್ದರು. ತಿಪ್ಪಣ್ಣ ಎಸ್. ವಾಲಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.