ಭಾಲ್ಕಿ: ತಾಲ್ಲೂಕಿನ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲ ಪಬ್ಲಿಕ್ ಶಾಲೆಯ 30 ವಿದ್ಯಾರ್ಥಿಗಳು ಅಗ್ರಶ್ರೇಣಿಯಲ್ಲಿ ಪಾಸ್ ಆಗಿದ್ದಾರೆ.
ವಿದ್ಯಾರ್ಥಿಗಳಾದ ಭಾಗ್ಯಶ್ರೀ ಬಾಲರೆಡ್ಡಿ, ವಿನಾಯಕ್ ದೇವೇಂದ್ರ 96.96 ಪ್ರತಿಶತ ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ಪ್ರಾಚಾರ್ಯ ಕೆ. ರಂಗಾರೆಡ್ಡಿ ತಿಳಿಸಿದ್ದಾರೆ.
ಆಕಾಂಕ್ಷಾ ಮಿಥುನ 96.80, ಅನ್ಮೋಲ್ ಶಾಂತಕುಮಾರ 96.00, ಸಾಯಿರೆಡ್ಡಿ ನಾಮದೇವ ರೆಡ್ಡಿ 96.04, ಭೂಮಿಕಾ ರಮೇಶ 94.40, ಸಮರ್ಥ ಸಂತೋಷಕುಮಾರ 94.40, ಆರತಿ ವಸಂತ 93.92, ಬಸವಪ್ರಸಾದ ನಾಗನಾಥ 93.92, ರೋಹಿತ್ ಅನಿಲ್ 93.76, ಸಂತೋಷಿ ಅಮರ 93.60, ಸ್ನೇಹಾ ಮನೋಹರ 93.44, ವಿಶ್ವಾಸ ಹನುಮಾನ 93.28, ವಿಶ್ವಜಿತ್ ರಾಜಕುಮಾರ 92.96, ಶ್ರಾವಣಿ ರಾಮಚಂದ್ರ 92.32, ಮಯೂರೇಶ್ ಶಾಂತಲಿಂಗ 92.16, ಅಣ್ಣಾರಾವ್ ನಾಗನಾಥ 91.68, ಸಾಯಿನಾಥ ಶಾಂತಕುಮಾರ 91.20, ಶಿಖರ ಚಂದಪ್ಪ 91.04, ವೀರನಾಥ ಸಂಗಮೇಶ 90.72, ಶೃತಿ ರಾಜಕುಮಾರ 90.40, ವರುಣ ರತಿಕಾಂತ 90.40, ಶ್ರೇಯಸ್ ಚಂದ್ರಶೇಖರ 90.24, ಅಪೇಕ್ಷ ನಾಗನಾಥ 89.44, ದೀಪ್ತಿ ಮಹಾರುದ್ರಪ್ಪ 89.28, ಸೃಜನ್ ಸಂಜುಕುಮಾರ 88.16, ಸುಮಿತ್ ಜಟ್ಟಿಂಗ್ 88.16, ರೋಹಿತ್ ಶಿವಾನಂದ್ 87.84, ವೈಷ್ಣವಿ ಗಣಪತಿ 87.52, ಅನ್ಮೋಲ್ ವಿಶ್ವನಾಥ್ 87.02 ಪ್ರತಿಶತ ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. 25 ಪ್ರಥಮ, 7 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಪಾಸ್ ಆಗಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಕಾರ್ಯದರ್ಶಿ ಮಹಾಲಿಂಗ ಸ್ವಾಮೀಜಿ, ಆಡಳಿತಾಧಿಕಾರಿ ಮೋಹನರೆಡ್ಡಿ, ಪ್ರಾಚಾರ್ಯ ಬಸವರಾಜ ಮೊಳಕೀರೆ, ಎನ್.ರಾಜು, ಕೆ.ರಂಗಾರೆಡ್ಡಿ, ಪ್ರಶಾಂತರೆಡ್ಡಿ, ಶಶಿಕುಮಾರ, ವೀರಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.