ADVERTISEMENT

ಮೊದಲ ದಿನದ ಪರೀಕ್ಷೆ ಸುಗಮ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2023, 16:30 IST
Last Updated 31 ಮಾರ್ಚ್ 2023, 16:30 IST
ಹುಲಸೂರ ತಾಲ್ಲೂಕಿನ ಮೇಹಕರದ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಿತು
ಹುಲಸೂರ ತಾಲ್ಲೂಕಿನ ಮೇಹಕರದ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಿತು   

ಹುಲಸೂರ: ತಾಲ್ಲೂಕಿನ ಮೇಹಕರ ಪ್ರೌಢ ಶಾಲೆಯಲ್ಲಿ ಮೊದಲ ದಿನದ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮವಾಗಿ ನಡೆಯಿತು.

‘ಸುತ್ತಮುತ್ತಲ ಗ್ರಾಮಗಳಾದ ಅತ್ತಾರ್ಗಾ, ಅಲವಾಯಿ, ತುಗಾವ್.ಎಚ್‌ ಹಾಗೂ ವಾಂಜರಖೇಡ ಗ್ರಾಮದ 265 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಕನ್ನಡ ಹಾಗೂ ಇಂಗ್ಲಿಷ್ ಭಾಷಾ ಪರೀಕ್ಷೆಗೆ 12 ವಿದ್ಯಾರ್ಥಿಗಳು ಗೈರಾದರು’ ಎಂದು ಪರೀಕ್ಷೆ ಮುಖ್ಯಾಧಿಕಾರಿ ದೇವಾನಂದ ನಾಂಜವಾಡೆ ಹೇಳಿದರು .

‘ವಿದ್ಯಾರ್ಥಿಗಳು ಗೊಂದಲವಿಲ್ಲದೆ ಸರಳವಾಗಿ ಪರೀಕ್ಷೆ ಬರೆಯಲು ಹಾಗೂ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಶಾಲೆ ಸುತ್ತಮುತ್ತ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿತ್ತು’ ಎಂದು ಪಿಎಸ್ಐ ಮಡಳಪ್ಪ ಬಗೋಡಿ ಹೇಳಿದರು.

ADVERTISEMENT

ಶ್ರೀನಿವಾಸ್ ಜಾಧವ, ಸುಗ್ರೀವ ಕಾಸರ್, ಇಸ್ಮಾಯಿಲ್ ಖಾನ್, ಗೌತಮ್ ವಾಂಖಡೆ ಮತ್ತು 14 ಜನ ಶಿಕ್ಷಕರು, ಆರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸ್ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.