ADVERTISEMENT

ಮದನೂರು: ದೇವಸ್ಥಾನ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 10 ಮೇ 2022, 4:12 IST
Last Updated 10 ಮೇ 2022, 4:12 IST
ಮದನೂರ ಗ್ರಾಮದಲ್ಲಿ ಮೈಲಾರ ಮಲ್ಲಣ್ಣ ದೇವಸ್ಥಾನದ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣದ ಪ್ರಯುಕ್ತ ಹೋಮ ಮಾಡಲಾಯಿತು
ಮದನೂರ ಗ್ರಾಮದಲ್ಲಿ ಮೈಲಾರ ಮಲ್ಲಣ್ಣ ದೇವಸ್ಥಾನದ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣದ ಪ್ರಯುಕ್ತ ಹೋಮ ಮಾಡಲಾಯಿತು   

ಕಮಲನಗರ: ತಾಲ್ಲೂಕಿನ ಮದನೂರು ಗ್ರಾಮದಲ್ಲಿ ಮೈಲಾರ ಮಲ್ಲಣ್ಣ ದೇವಸ್ಥಾನ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮ ನಡೆಯಿತು.

ಸೋನಾಳ ಗ್ರಾಮದ ಪುರೋಹಿತ ಅಶೋಕ್ ಜೋಶಿ, ಮದನೂರ ಗ್ರಾಮದ ಶಿವಾನಂದಸ್ವಾಮಿ ಹಾಗೂ ಗ್ರಾಮದ ಎಲ್ಲ ಸ್ವಾಮೀಜಿಗಳ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಮೈಲಾರ ಮಲ್ಲಣ್ಣ ದೇವಸ್ಥಾನದ ಗೋಪುರಕ್ಕೆ ಕಳಸಾರೋಹಣ ಹಾಗೂ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು.

ADVERTISEMENT

ವಾದ್ಯಗಳೊಂದಿಗೆ ಕುಂಭಪೂಜೆ ಹಾಗೂ ಮೆರವಣಿಗೆ ನಡೆಯಿತು. ಮಹಿಳೆಯರು, ಪುರುಷರು ಡೊಳ್ಳು ಕುಣಿತಕ್ಕೆ ಹೆಜ್ಜೆ ಹಾಕಿದರು.

ಹೋಮ–ಹವನ:ದೇವರ ಪೂಜೆ, ಹೋಮ, ದುರ್ಗಾ ಹೋಮ, ಚಂಡಿ ಹೋಮ, ಸಂಕ್ಷಿಪ್ತ ಪೂರ್ಣಾಹುತಿ ಸೇರಿದಂತೆ ವಿವಿಧ ರೀತಿಯ ವಿಶೇಷ ಪೂಜಾ ಕಾರ್ಯ, ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಿತು.

ಪ್ರಾಣ ಪ್ರತಿಷ್ಠಾನ ಪೂಜೆ: ವಿವಿಧ ಶ್ರೀಗಳ ಸಾನ್ನಿಧ್ಯದಲ್ಲಿ ಸುಪ್ರಭಾತ, ದೇವತಾ ಉದ್ದಾಪನೆ, ದೇವತಾ ಪೂಜೆಯೊಂದಿಗೆ ಗ್ರಾಮ ದೇವತೆ ಹಾಗೂ ನವಗ್ರಹ ಪ್ರಾಣ ಪ್ರತಿಷ್ಠಾಪನೆ ನಡೆಯಿತು.

ಗ್ರಾಮಸ್ಥರಾದ ಶಶಿಕಾಂತ್ ಪಾಟೀಲ, ಗಾಳಪ್ಪ ಬಳತೆ, ಅಶೋಕ ಪಾಟೀಲ, ಸಂತೋಷ ಬಿರಾದಾರ ಹಾಗೂ ಬಾಲಾಜಿ ಬಿರಾದಾರ, ವೀರೇಶ ಬರ್ಗೆ ಹಾಗೂ ವಿಜಯಕುಮಾರ್ ಅವರು ಈ ವೇಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.