ADVERTISEMENT

ಮಹಾವೀರ ಜಯಂತಿ: ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2019, 14:50 IST
Last Updated 17 ಏಪ್ರಿಲ್ 2019, 14:50 IST
ಬೀದರ್‌ ನಲ್ಲಿ ಬುಧವಾರ ಮಹಾವೀರ ಜಯಂತಿ ಅಂಗವಾಗಿ ನಡೆದ ಮಹಾವೀರ ಭಾವಚಿತ್ರದ ಮೆರವಣಿಗೆಯಲ್ಲಿ ಕಳಶ ಹೊತ್ತು ಸಾಗಿದ ಮಹಿಳೆಯರು
ಬೀದರ್‌ ನಲ್ಲಿ ಬುಧವಾರ ಮಹಾವೀರ ಜಯಂತಿ ಅಂಗವಾಗಿ ನಡೆದ ಮಹಾವೀರ ಭಾವಚಿತ್ರದ ಮೆರವಣಿಗೆಯಲ್ಲಿ ಕಳಶ ಹೊತ್ತು ಸಾಗಿದ ಮಹಿಳೆಯರು   

ಬೀದರ್‌: ನಗರದಲ್ಲಿ ಮಹಾವೀರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಜಯಂತಿ ಪ್ರಯುಕ್ತ ಜೈನ ಬಸದಿಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ನಗರದ ಕ್ರಾಂತಿಗಣೇಶ ಮೈದಾನ ಸಮೀಪದ ಜೈನ ಮಂದಿರದ ಆವರಣದಿಂದ ಆರಂಭವಾದ ಮಹಾವೀರ ಭಾವಚಿತ್ರದ ಮೆರವಣಿಗೆಯು ಹಳೆಯ ತರಕಾರಿ ಸಗಟು ಮಾರುಕಟ್ಟೆ, ಗವಾನ್‌ ಚೌಕ್‌, ಚೌಬಾರಾ, ಬಸವೇಶ್ವರ ವೃತ್ತ, ಮಹಾವೀರ ವೃತ್ತ, ಅಂಬೇಡ್ಕರ್‌ ವೃತ್ತದ ಮಾರ್ಗವಾಗಿ ಜೈನ ಮಂದಿರಕ್ಕೆ ಮರಳಿತು.

ಸಾರೋಟಿನಲ್ಲಿ ಮಹಾವೀರ ಭಾವಚಿತ್ರ ಇಡಲಾಗಿತ್ತು. ಮಹಿಳೆಯರು ಸಮವಸ್ತ್ರ ಧರಿಸಿ ತಲೆಯ ಮೇಲೆ ಕಳಸಹೊತ್ತು ಮೆರವಣಿಗೆಯಲ್ಲಿ ಸೆಳೆದರು. ಸಂಜೆ ಸಾಂಸ್ಕೃತಿಕ ಹಾಗೂ ಪ್ರವಚನ ಕಾರ್ಯಕ್ರಮ ನಡೆದವು

ADVERTISEMENT

ವಿಜಯಕುಮಾರ ಜೈನ್, ಮಹಾವೀರ ಟಿಕ್ಕೆ, ನೇಮಿನಾಥ ಬೆಳಕೆರೆ, ಅಶೋಕ ವನಕುದುರೆ, ರಾಜಕುಮಾರ ಲೋಖಂಡೆ, ಅಜೀತ ಚಿಂದೆ, ಶೈಲಾ ವನಕುದುರೆ, ಶಾಂತಾಬಾಯಿ ಬೆಳಕೆರೆ, ಸುಗಂಧಾ ವನಕುದರೆ ಇದ್ದರು.

ಜಿಲ್ಲಾಡಳಿತದಿಂದ ಮಹಾವೀರ ಜಯಂತಿ ಆಚರಣೆ

ಬೀದರ್‌: ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಬುಧವಾರ ಮಹಾವೀರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಜಿಲ್ಲಾಧಿಕಾರಿ ಡಾ.ಎಚ್.ಆರ್. ಮಹಾದೇವ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಗಾಳಿ ಅವರು ಮಹಾವೀರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಸಮುದಾಯದ ಗಣ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.