ADVERTISEMENT

ಬಸವ ಧರ್ಮ ಜಾಗತಿಕ ಮಟ್ಟದಲ್ಲಿ ಬೆಳೆಸಲು ಸಂಕಲ್ಪ ತೊಡಿ: ಪಟ್ಟದ್ದೇವರ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 13 ಮೇ 2022, 14:21 IST
Last Updated 13 ಮೇ 2022, 14:21 IST
ಬೀದರ್‌ನ ಡಾ. ಚನ್ನಬಸವ ಪಟ್ಟದ್ದೇವರು ಪ್ರಸಾದ ನಿಲಯದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಹಾಗೂ ಅನುಭವ ಮಂಟಪ ತಿಂಗಳ ಕಾರ್ಯಕ್ರಮದಲ್ಲಿ ಚಿಂತಕ ಮಹಾರುದ್ರ ಡಾಕುಳಗಿ ದೀಪ ಬೆಳಗಿಸಿದರು
ಬೀದರ್‌ನ ಡಾ. ಚನ್ನಬಸವ ಪಟ್ಟದ್ದೇವರು ಪ್ರಸಾದ ನಿಲಯದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಹಾಗೂ ಅನುಭವ ಮಂಟಪ ತಿಂಗಳ ಕಾರ್ಯಕ್ರಮದಲ್ಲಿ ಚಿಂತಕ ಮಹಾರುದ್ರ ಡಾಕುಳಗಿ ದೀಪ ಬೆಳಗಿಸಿದರು   

ಬೀದರ್: ಬಸವ ಧರ್ಮವನ್ನು ಜಾಗತಿಕ ಮಟ್ಟದಲ್ಲಿ ಬೆಳೆಸಲು ಬಸವ ಭಕ್ತರು ಸಂಕಲ್ಪ ತೊಡಬೇಕು ಎಂದು ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ಕಿವಿಮಾತು ಹೇಳಿದರು.

ಇಲ್ಲಿಯ ಡಾ. ಚನ್ನಬಸವ ಪಟ್ಟದ್ದೇವರು ಪ್ರಸಾದ ನಿಲಯದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಹಾಗೂ ಅನುಭವ ಮಂಟಪ ತಿಂಗಳ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಬಸವ ಭಕ್ತರು ಜಾಗೃತರಾದರೆ ಬಸವ ಧರ್ಮವು ಇಸ್ಲಾಂ, ಕೈಸ್ತ ಧರ್ಮಗಳಂತೆ ವಿಶ್ವ ಮೂಲೆ, ಮೂಲೆಗಳನ್ನು ತಲುಪಲು ಸಾಧ್ಯವಿದೆ ಎಂದು ತಿಳಿಸಿದರು.

ADVERTISEMENT

ದೀನ-ದಲಿತರು, ಬಡವರು, ಕೆಳಗೆ ಬಿದ್ದವರನ್ನು ಮೇಲಕ್ಕೇತ್ತುವುದು, ವೃದ್ಧರು, ಅನಾಥರು ರೋಗಿಗಳ ಸೇವೆ ಮಾಡುವುದೇ ಬಸವ ಧರ್ಮದ ಸಿದ್ಧಾಂತವಾಗಿದೆ ಎಂದು ನುಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಮಹೇಶ ಬಿರಾದಾರ, ಪತ್ರಕರ್ತ ಮಹಾರುದ್ರ ಡಾಕುಳಗಿ, ನಗರಸಭೆ ಸದಸ್ಯ ದಿಗಂಬರ ಮಡಿವಾಳ ಮಾತನಾಡಿದರು.
ಬಸವ ಜಯಂತಿ ಉತ್ಸವ ಯಶಸ್ವಿಗೊಳಿಸಿದ ಪ್ರಯುಕ್ತ ಬಸವ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷ ಬಸವರಾಜ ಪಾಟೀಲ ಹಾರೂರಗೇರಿ, ಶಕುಂತಲಾ ಬೆಲ್ದಾಳೆ, ವಿರೂಪಾಕ್ಷ ಗಾದಗಿ, ಸಂಗ್ರಾಮ ಎಂಗಳೆ, ಯುವ ವಿಜ್ಞಾನಿ ಚಂದ್ರಪ್ಪ ಜಾಬಾ ಅವರನ್ನು ಸನ್ಮಾನಿಸಲಾಯಿತು.

ಸಾಹಿತಿ ರಾಜು ಜುಬ್ರೆ, ವಚನಶ್ರೀ ಹಾಗೂ ಕಲಾವಿದ ಚನ್ನಬಸಪ್ಪ ನೌಬಾದೆ ವಚನ ಗಾಯನ ಮಾಡಿದರು.
ಪ್ರಮುಖರಾದ ಶ್ರೀಕಾಂತ ಬಿರಾದಾರ, ಸಂಗ್ರಾಮಪ್ಪ ಬಿರಾದಾರ, ಗುರುನಾಥ ಬಿರಾದಾರ, ಮಲ್ಲಿಕಾರ್ಜುನ ಹುಡಗೆ, ಶರಣಪ್ಪ ಚಿಮಕೋಡೆ, ಸುವರ್ಣ ಚಿಮಕೋಡೆ, ನಾಗಶೆಟ್ಟಿ ಧರಂಪುರ, ಪ್ರಸಾದ ನಿಲಯದ ವ್ಯವಸ್ಥಾಪಕ ಶ್ರೀಕಾಂತ ಸ್ವಾಮಿ ಇದ್ದರು.

ಯೋಗೇಂದ್ರ ಯದಲಾಪುರೆ ಸ್ವಾಗತಿಸಿದರು. ಪ್ರೊ. ಉಮಾಕಾಂತ ಮೀಸೆ ನಿರೂಪಿಸಿದರು. ಲಕ್ಷ್ಮಿ ಬಿರಾದಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.