ADVERTISEMENT

ಮಕ್ಕಳ ಶಿಕ್ಷಣಕ್ಕೆ ಆದ್ಯತೆ ಕೊಡಿ

ಪ್ರಾರ್ಥನಾ ಕೂಟ ಸಮಾರೋಪದಲ್ಲಿ ಸಂಜಯ್ ಜಾಗೀರದಾರ್ ಸಲಹೆ

​ಪ್ರಜಾವಾಣಿ ವಾರ್ತೆ
Published 17 ಮೇ 2022, 16:25 IST
Last Updated 17 ಮೇ 2022, 16:25 IST
ಬೀದರ್ ತಾಲ್ಲೂಕಿನ ಅಷ್ಟೂರು ಗ್ರಾಮದಲ್ಲಿ ನಡೆದ ಉಜ್ಜೀವನ ಪ್ರಾರ್ಥನಾ ಕೂಟದ ಸಮಾರೋಪ ಸಮಾರಂಭದಲ್ಲಿ ಬಿಡಿಎ ಮಾಜಿ ಅಧ್ಯಕ್ಷ ಸಂಜಯ್ ಜಾಗೀರದಾರ್, ಪಾಸ್ಟರ್‌ಗಳಾದ ದೇವರಾಜ ಹಾಗೂ ರಮೇಶ ಅವರನ್ನು ಸನ್ಮಾನಿಸಲಾಯಿತು
ಬೀದರ್ ತಾಲ್ಲೂಕಿನ ಅಷ್ಟೂರು ಗ್ರಾಮದಲ್ಲಿ ನಡೆದ ಉಜ್ಜೀವನ ಪ್ರಾರ್ಥನಾ ಕೂಟದ ಸಮಾರೋಪ ಸಮಾರಂಭದಲ್ಲಿ ಬಿಡಿಎ ಮಾಜಿ ಅಧ್ಯಕ್ಷ ಸಂಜಯ್ ಜಾಗೀರದಾರ್, ಪಾಸ್ಟರ್‌ಗಳಾದ ದೇವರಾಜ ಹಾಗೂ ರಮೇಶ ಅವರನ್ನು ಸನ್ಮಾನಿಸಲಾಯಿತು   

ಜನವಾಡ: ಕ್ರೈಸ್ತರು ತಮ್ಮ ಮಕ್ಕಳ ಶಿಕ್ಷಣಕ್ಕೆ ಮೊದಲ ಆದ್ಯತೆ ಕೊಡಬೇಕು ಎಂದು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಂಜಯ್ ಜಾಗೀರದಾರ್ ಸಲಹೆ ಮಾಡಿದರು.


ಬೀದರ್ ತಾಲ್ಲೂಕಿನ ಅಷ್ಟೂರು ಗ್ರಾಮದ ಮೆಥೋಡಿಸ್ಟ್ ಚರ್ಚ್‍ನಲ್ಲಿ ಆಯೋಜಿಸಿದ್ದ ಉಜ್ಜೀವನ ಪ್ರಾರ್ಥನಾ ಕೂಟದ ಸಮಾರೋಪ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.


ಸಾಧನೆಗೆ ಬಡತನ ಅಡ್ಡಿಯಾಗಲಾರದು. ಕಾರಣ, ಮಕ್ಕಳು ಸಾಧಿಸುವ ಛಲ ಬೆಳೆಸಿಕೊಳ್ಳಬೇಕು. ಉನ್ನತ ಹುದ್ದೆಗಳ ಗುರಿ ಇಟ್ಟುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ADVERTISEMENT


ದಯೆ, ಕರುಣೆ, ಪ್ರೀತಿ, ಶಾಂತಿ, ಸಹಬಾಳ್ವೆ ಕ್ರೈಸ್ತ ಧರ್ಮದ ತತ್ವಗಳಾಗಿವೆ ಎಂದು ತಿಳಿಸಿದರು.
ಬಳ್ಳಾರಿಯ ಪಾಸ್ಟರ್ ದೇವರಾಜ್ ಮಾತನಾಡಿ, ನೆರೆ ಹೊರೆಯವರನ್ನು ಪ್ರೀತಿಸಬೇಕು. ಅವರು ಉನ್ನತಿ ಸಾಧಿಸಿದಾಗ ಖುಷಿಪಡಬೇಕು. ದ್ವೇಷ, ಅಸೂಯೆಗೆ ಅವಕಾಶ ಕೊಡಬಾರದು ಎಂದು ಹೇಳಿದರು.


ಯುವಕರು ಧರ್ಮದ ದಾರಿಯಲ್ಲಿ ನಡೆಯಬೇಕು. ದುಶ್ಚಟಗಳಿಂದ ದೂರವಿರಬೇಕು. ಪಾಲಕರು, ಗುರು, ಹಿರಿಯರನ್ನು ಗೌರವಿಸಬೇಕು ಎಂದು ತಿಳಿಸಿದರು.


ಪಾಸ್ಟರ್‍ಗಳಾದ ರಮೇಶ, ಅಬ್ರಾಹಂ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ ನಾಗಲಗಿದ್ದಿ, ಸದಸ್ಯರಾದ ಶಶಿಧರ ಪಾಟೀಲ, ರಾಜು ಪಾಟೀಲ, ಸುನಿಲ್ ಬುಧೇರಾ, ಬಾಬಣ್ಣ ಕಟ್ಟಿಮನಿ, ತುಕಾರಾಮ, ಮುಖಂಡರಾದ ಜಯರಾಮ, ವಿನೋದ, ಅನಿಲ್ ಮೇತ್ರೆ, ಪ್ರವೀಣ ದೇವನೂರ, ಭೀಮಣ್ಣ ಜಮಗಿ, ಇಮ್ಯಾನುವೆಲ್, ಯೇಶಪ್ಪ ದೇವನೂರ, ರಾಜಕುಮಾರ ಆಗಸ್ಟಿನ್, ನಾಗಪ್ಪ, ಜಾನ್ಸನ್, ಮನೋಹರ ಕಾಶೆಂಪೂರ, ಜೈರಾಜ್, ರಾಜಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.