ADVERTISEMENT

ಸಂಭ್ರಮದ ಮಾರಮ್ಮ ದೇವಿ ಜಾತ್ರೆ

​ಪ್ರಜಾವಾಣಿ ವಾರ್ತೆ
Published 15 ಮೇ 2022, 12:49 IST
Last Updated 15 ಮೇ 2022, 12:49 IST
ಅಂತರ ಭಾರತಿ ತಾಂಡಾದಲ್ಲಿ ಮಾರಮ್ಮ ದೇವಿ ಜಾತ್ರೆ ಪ್ರಯುಕ್ತ ಪಲ್ಲಕ್ಕಿ ಉತ್ಸವ ನಡೆಯಿತು
ಅಂತರ ಭಾರತಿ ತಾಂಡಾದಲ್ಲಿ ಮಾರಮ್ಮ ದೇವಿ ಜಾತ್ರೆ ಪ್ರಯುಕ್ತ ಪಲ್ಲಕ್ಕಿ ಉತ್ಸವ ನಡೆಯಿತು   

ಅಂತರಭಾರತಿ ತಾಂಡಾ (ಹುಲಸೂರ): ಮಾರಮ್ಮ ದೇವಿ ಜಾತ್ರೆ ಸಂಭ್ರಮದಿಂದ ನಡೆಯಿತು. ಕೋವಿಡ್ ಕಾರಣ ಎರಡು ವರ್ಷಗಳಿಂದ ಜಾತ್ರೆಯನ್ನು ಅದ್ದೂರಿಯಾಗಿ ಆಚರಿಸಲು ಆಗಿರಲಿಲ್ಲ.

ಶನಿವಾರ ಹಾಗೂ ಭಾನುವಾರ ಮಾರಮ್ಮ ದೇವಿ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಭಜನಾ ಕಾರ್ಯಕ್ರಮಗಳು ನಡೆದವು. ಪಲ್ಲಕ್ಕಿ ಉತ್ಸವ ನಡೆಯಿತು.

ತಾಂಡಾ ನಿವಾಸಿಗಳು ಮನೆಗಳಲ್ಲಿ ವಿವಿಧ ರೀತಿಯ ಅಡುಗೆ ತಯಾರಿಸಿ ಸಂಬಂಧಿಗಳನ್ನು ಆಮಂತ್ರಿಸಿ ಉಣಬಡಿಸಿದರು.

ADVERTISEMENT

ಬಸವರಾಜ ನಾಯಕ, ಗ್ರಾಮ ಪಂಚಾಯಿತಿ ಸದಸ್ಯ ದೇವಿಂದ್ರ ಪವಾರ, ವಿನಾಯಕ ಪವಾರ, ಹೀರೂ ಪೂಜಾರಿ, ಲೋಕು, ಧನಾಜಿ, ರಾಜೇಂದ್ರ ಜಾಧವ, ಕಿಶನ್ ಪವಾರ, ರುಪು ಪವಾರ, ಕಾಶಿನಾಥ, ಕಿಶನ್ ಲಷ್ಕರಿ ರಾಠೋಡ, ಚಾಪೂ ರಾಠೋಡ, ಪರಶುರಾಮ ರಾಠೋಡ, ಉಮೇಶ ಭೊಪಳೆ ಸೇರಿ ಸುತ್ತಮುತ್ತಲಿನ ತಾಂಡಾಗಳ ಜನ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.