ಚಿಟಗುಪ್ಪ: ‘ಆಧ್ಯಾತ್ಮ ಚಿಂತನೆಯಿಂದ ಆತ್ಮ ಶಾಂತಿ ಸಿಗುತ್ತದೆ. ದೇವರ ನಾಮ ಸ್ಮರಣೆಯಿಂದ ಆತ್ಮ ಶಕ್ತಿ ಹೆಚ್ಚುತ್ತದೆ’ ಎಂದು ಸದ್ರೂಪನಂದ ಭಾರತಿ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಇಟಗಾ ಗ್ರಾಮದ ಮುಕ್ತಿಮಠದಲ್ಲಿ ಭಾನುವಾರ ರಾತ್ರಿ ನಡೆದ ಚನ್ನಮಲ್ಲೇಶ್ವರ ತ್ಯಾಗಿ ಸ್ವಾಮೀಜಿ ಅವರ 69ನೇ ಜನ್ಮೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕಾಯಕದಲ್ಲಿ ಪ್ರಾಮಾಣಿಕತೆ ಇರಬೇಕು. ಆಚಾರ, ವಿಚಾರದಲ್ಲಿ ಪರಿಶುದ್ಧತೆ ಇರಬೇಕು. ಆಗ ವಿಶ್ವವನ್ನೇ ಗೆಲ್ಲುವ ಶಕ್ತಿ ಬರುತ್ತದೆ. ನಿತ್ಯ ಜಾಗೃತಿ ಜೀವನ ನಡೆಸುವ ಮನೋಭಾವ ಬೆಳೆಸಿಕೊಳ್ಳಬೇಕು. ಎಲ್ಲರ ಒಳಿತನ್ನು ಬಯಸಬೇಕು. ಯಾರಿಗೂ ಕೆಡಕು ಮಾಡಬಾರದು’ ಎಂದರು.
ನಾಗಲಿಂಗ ಸ್ವಾಮೀಜಿ, ನಾವದಗಿಯ ಶಾಂತವೀರಯ್ಯ ಸ್ವಾಮಿ ಮಾತನಾಡಿದರು.
ಸಾಹಿತಿ ವಿ.ಎನ್.ಮಠಪತಿ ವಿಶೇಷ ಉಪನ್ಯಾಸ ನೀಡಿದರು.
ಚಂದ್ರಕಾಂತ ಖೇಣಿ, ಶಿವಶರಣಯ್ಯ ಸ್ವಾಮಿ, ಚಂದ್ರಕಾಂತ ಸ್ವಾಮಿ, ಅಸ್ಲಾಮಮಿಯ್ಯ, ಇಂದ್ರಣ್ಣ ಮೈಲೂರ್, ಕಲ್ಲಯ್ಯ ಸ್ವಾಮಿ, ಹಾವಗಿರಾವ ಪಾಟೀಲ, ಮಾಣಿಕರಾವ ಪಾಟೀಲ, ಜೀವವಿಮಾ ಅಭಿವೃದ್ಧಿ ಅಧಿಕಾರಿ ವಿನಯ ಕುಮಾರ, ಮಲ್ಲಿಕಾರ್ಜುನ ಮುನ್ನೂರ, ಮಹೇಶ ಜೋಗಣಿ, ಶಿವಶರಣಯ್ಯ ಸ್ವಾಮಿ, ಚಂದ್ರಕಾಂತ ಸ್ವಾಮಿ, ಡಾ.ಪ್ರಮೋದ ಖೇಣಿ, ಆಕಾಶ ಖೇಣಿ ಹಾಗೂ ಅಶೋಕ ಚೌದ್ರಿ ಇದ್ದರು. ನೀಲಕಂಠ ಇಸ್ಲಾಂಪುರ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.