ADVERTISEMENT

ಖೇಡ್-ಸಂಗಮ: ಪಾದಯಾತ್ರೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2022, 4:53 IST
Last Updated 24 ನವೆಂಬರ್ 2022, 4:53 IST
ಭಾಲ್ಕಿ ಹಿರೇಮಠದ ಪೀಠಾಧ್ಯಕ್ಷ ಗುರುಬಸವ ಪಟ್ಟದ್ದೇವರು ಬುಧವಾರ ಜ್ಯೋತಿ ಹಿಡಿದು ಬಸವಕಲ್ಯಾಣ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು
ಭಾಲ್ಕಿ ಹಿರೇಮಠದ ಪೀಠಾಧ್ಯಕ್ಷ ಗುರುಬಸವ ಪಟ್ಟದ್ದೇವರು ಬುಧವಾರ ಜ್ಯೋತಿ ಹಿಡಿದು ಬಸವಕಲ್ಯಾಣ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು   

ಕಮಲನಗರ: ತಾಲ್ಲೂಕಿನ ಖೇಡ್-ಸಂಗಮ ಗ್ರಾಮದ ನೀಲಾಂಬಿಕಾ ಆಶ್ರಮದಲ್ಲಿ ಭಾಲ್ಕಿಯ ಗುರುಬಸವ ಪಟ್ಟದ್ದೇವರು ಅನುಭವ ಮಂಟಪ ಪಾದಯಾತ್ರೆಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು,‘ಶರಣರು, ಸಂತರು ನಡೆದಾಡಿದ ಭೂಮಿ ಬಸವಕಲ್ಯಾಣಕ್ಕೆ ಪಾದಯಾತ್ರೆ ಮಾಡುತ್ತಿರುವುದು ಐತಿಹಾಸಿಕ’ ಎಂದು ಹೇಳಿದರು.

ಮಹಾದೇವಮ್ಮ ತಾಯಿ ಮಾತನಾಡಿ,‘ವಿಶ್ವಗುರು ಬಸವಣ್ಣ ನವರು, ಡಾ.ಚನ್ನಬಸವ ಪಟ್ಟದ್ದೇವರು ಮಹಿಳೆಯರಿಗೆ ಸಮಾನ ಅವಕಾಶ ಸಿಗಬೇಕು. ಮಹಿಳೆಯರು ವಚನಗಳನ್ನು ಪಠಣ ಮಾಡಬೇಕು ಎಂಬ ನಿಲುವನ್ನು ಹೊಂದಿದ್ದರು. ಸುಮಾರು 20 ಹಳ್ಳಿಯ ಭಕ್ತರು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದರು. ಓಂಪ್ರಕಾಶ ಅವರು ಅಧ್ಯಕ್ಷತೆ ವಹಿಸಿದ್ದರು. ಸಂಪೂರ್ಣಾ ನಿರೂಪಿಸಿದರು. ಹಲವರು ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.