ADVERTISEMENT

ಗುರುಭಕ್ತಿ, ಗುರುನಿಷ್ಠೆ ಕಣ್ಮರೆ- ಪಟ್ಟದ್ದೇವರು ಕಳವಳ

ಹಿರೇಮಠದಲ್ಲಿ ಶಿವಕುಮಾರ ಶ್ರೀ ಜಯಂತಿ ಕಾರ್ಯಕ್ರಮದಲ್ಲಿ ಪಟ್ಟದ್ದೇವರು ಕಳವಳ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2023, 12:53 IST
Last Updated 1 ಏಪ್ರಿಲ್ 2023, 12:53 IST
ಭಾಲ್ಕಿ ಹಿರೇಮಠ ಸಂಸ್ಥಾನದಲ್ಲಿ ಶಿವಕುಮಾರ ಸ್ವಾಮೀಜಿ ಅವರ 116ನೇ ಜಯಂತಿ ಕಾರ್ಯಕ್ರಮ ನಡೆಯಿತು
ಭಾಲ್ಕಿ ಹಿರೇಮಠ ಸಂಸ್ಥಾನದಲ್ಲಿ ಶಿವಕುಮಾರ ಸ್ವಾಮೀಜಿ ಅವರ 116ನೇ ಜಯಂತಿ ಕಾರ್ಯಕ್ರಮ ನಡೆಯಿತು   

ಭಾಲ್ಕಿ: ‘ಇತ್ತೀಚಿನ ದಿನಗಳಲ್ಲಿ ಭಕ್ತರಲ್ಲಿ, ವಿದ್ಯಾರ್ಥಿಗಳಲ್ಲಿ ಗುರುಭಕ್ತಿ, ಗುರುನಿಷ್ಠೆ ಕಣ್ಮರೆಯಾಗುತ್ತಿದೆ’ ಎಂದು ಅನುಭವ ಮಂಟಪದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಕಳವಳ ವ್ಯಕ್ತಪಡಿಸಿದರು.

ಇಲ್ಲಿಯ ಹಿರೇಮಠ ಸಂಸ್ಥಾನದಲ್ಲಿ ಸಿದ್ದಗಂಗಾ ಮಠದ ಹಳೆಯ ವಿದ್ಯಾರ್ಥಿ ಹಾಗೂ ಹಿತೈಷಿಗಳ ಸಂಘ ಹಮ್ಮಿಕೊಂಡಿದ್ದ ಶಿವಕುಮಾರ ಸ್ವಾಮೀಜಿ ಅವರ 116ನೇ ಜಯಂತಿ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಸಿದ್ಧಗಂಗಾ ಮಠದ ಹಳೇ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು ಶಿವಕುಮಾರ ಸ್ವಾಮೀಜಿ ಅವರ ಬಗ್ಗೆ ಅಪಾರ ಗುರುನಿಷ್ಠೆ, ಭಕ್ತಿಯನ್ನು ಹೊಂದಿ ಜಿಲ್ಲೆಯಲ್ಲಿ ಶಿವಕುಮಾರ ಸ್ವಾಮೀಜಿ ಅವರ ಜಯಂತಿ ಸೇರಿದಂತೆ ಇತರ ಕಾರ್ಯಗಳನ್ನು ಕೈಗೊಳ್ಳುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

ಸಿದ್ಧಗಂಗಾ ಮಠದ ದಾಸೋಹ ವ್ಯವಸ್ಥೆ ಕಲ್ಪನೆಗೆ ಮೀರಿದ್ದು. ಸಿದ್ಧಗಂಗಾ ಶ್ರೀಗಳ ಹಸ್ತದಿಂದ ಭಾಲ್ಕಿ ಮಠಕ್ಕೆ ಸಿದ್ಧಗಂಗಾ ಪ್ರಶಸ್ತಿ ಸಿಕ್ಕಿರುವುದು ಹರ್ಷದ ಸಂಗತಿ. ಸಿದ್ಧಗಂಗಾ ಶ್ರೀ 111 ವರ್ಷ ಬದುಕಿ ಸಮಾಜವನ್ನು ಬೆಳಗಿದ್ದರು ಎಂದು ತಿಳಿಸಿದರು.

ಗುರುಬಸವ ಪಟ್ಟದ್ದೇವರು ಮಾತನಾಡಿ,‘ಶಿಕ್ಷಣ ಕ್ಷೇತ್ರದಲ್ಲಿನ ಅದಮ್ಯ ಸಾಧನೆಗೆ ಮಠಗಳೇ ಕಾರಣ. ಶಿಕ್ಷಣ, ದಾಸೋಹ, ಸೇವೆಗೆ ಮತ್ತೊಂದು ಹೆಸರು ಸಿದ್ಧಗಂಗಾ ಮಠ’ ಎಂದರು.

ಸಹಾಯಕ ಎಂಜಿನಿಯರ್ ಶಿವಶಂಕರ ಕಾಮಶೆಟ್ಟಿ ಮಾತನಾಡಿ,‘ಶಿವಕುಮಾರ ಶ್ರೀಗಳಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ಘೋಷಿಸಬೇಕು’ ಎಂದರು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಮಾತನಾಡಿದರು.

ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ, ಹಿತೈಷಿಗಳ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವಕುಮಾರ ಪಾಟೀಲ ತೇಗಂಪುರ ಅಧ್ಯಕ್ಷತೆ ವಹಿಸಿದ್ದರು.

ವಿದ್ಯಾರ್ಥಿ ಪ್ರಮುಖ ಈಶ್ವರ ರುಮ್ಮಾ, ಪತ್ರಕರ್ತ ದೀಪಕ ಠಮಕೆ, ಬಸವರಾಜ್‌ ಪ್ರಭಾ ಅವರಿಗೆ ವಿಶೇಷ ಸನ್ಮಾನ ಮಾಡಿ ಗೌರವಿಸಲಾಯಿತು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಶಂಭುಲಿಂಗ ಕಾಮಣ್ಣ, ಪಿಡಿಒ ಚಂದ್ರಶೇಖರ ಬನ್ನಾಳೆ, ಪ್ರಮುಖರಾದ ಕಾಶಿನಾಥ ಭೂರೆ, ಮಲ್ಲಿಕಾರ್ಜುನ ಮಣಿಗೇರೆ, ಗ್ರಾಮ ಪಂಚಾಯಿತಿ ಸದಸ್ಯ ಏಕನಾಥ ಮೇತ್ರೆ, ಪ್ರಮುಖರಾದ ಸಂತೋಷ ಪಾಟೀಲ, ಸೋಮನಾಥ ತುಗಶೆಟ್ಟೆ, ಸಿದ್ದು ತುಗಶೆಟ್ಟೆ, ನೀಲಕಂಠ ಬಿರಾದಾರ ಸೇರಿದಂತೆ ಇತರರು ಇದ್ದರು. ದೀಪಕ್ ಠಮಕೆ ನಿರೂಪಿಸಿದರು. ಸಂಜೀವಕುಮಾರ ಜಮಾದಾರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.