ADVERTISEMENT

ಶಾಲೆ ಉಳಿಸಿ ಅಭಿಯಾನದ ಶಂಭು ಖೇಳಗೆಕರ್

ಮಾಣಿಕ ಆರ್ ಭುರೆ
Published 1 ಜನವರಿ 2022, 10:19 IST
Last Updated 1 ಜನವರಿ 2022, 10:19 IST
ಶಂಭು ಖೇಳಗೆಕರ್
ಶಂಭು ಖೇಳಗೆಕರ್   

ಬಸವಕಲ್ಯಾಣ (ಬೀದರ್ ಜಿಲ್ಲೆ): ಬಸವಕಲ್ಯಾಣ ತಾಲ್ಲೂಕಿನ ಮುಡಬಿ ಗ್ರಾಮದ 24 ವರ್ಷದ ಶಂಭು ಖೇಳಗೆಕರ್ ಬಿಸಿಎ ಪದವೀಧರರು. ತಮ್ಮ ಓರಗೆಯ ಇನ್ನೂ ಪಿಯುಸಿ, ಪದವಿ ಶಿಕ್ಷಣ ಪಡೆಯುತ್ತಿರುವ 40 ಜನರನ್ನು ಸಂಘಟಿಸಿ, ಕನ್ನಡಿಗರ ಘರ್ಜನೆ ಸೇವಾ ಸಂಘ ಕಟ್ಟಿಕೊಂಡಿದ್ದಾರೆ. ಸಮಾಜಸೇವಾ ಕಾರ್ಯದಲ್ಲಿ ತೊಡಗಿದ್ದಾರೆ.

ಸರ್ಕಾರಿ ಶಾಲೆಗಳ ಸ್ಥಿತಿ ಹದಗೆಟ್ಟಿರುವುದನ್ನು ಕಂಡು ‘ಸರ್ಕಾರಿ ಶಾಲೆ ಉಳಿಸಿ’ ಅಭಿಯಾನ ಕೈಗೊಂಡಿದ್ದಾರೆ. ನಾಲ್ಕು ತಿಂಗಳಲ್ಲಿ ಬಸವಕಲ್ಯಾಣ, ಭಾಲ್ಕಿ, ಕಮಲಾಪುರ ತಾಲ್ಲೂಕುಗಳ ಒಂದು ಪದವಿ ಕಾಲೇಜು ಹಾಗೂ 20 ಗ್ರಾಮಗಳ ಶಾಲೆಗಳಿಗೆ ಸುಣ್ಣ ಹಚ್ಚಿದ್ದಾರೆ. ಆವರಣದಲ್ಲಿನ ಮುಳ್ಳುಕಂಟಿಗಳನ್ನು ತೆಗೆದು ಶುಚಿಗೊಳಿಸಿದ್ದಾರೆ. ದುರ್ಗುಣ, ದುಶ್ಚಟಗಳ ಬಗ್ಗೆ ಯುವಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಗ್ರಂಥಾಲಯಗಳ ಸ್ಥಾಪನೆಗೆ ಸರ್ಕಾರಕ್ಕೆ ಕೋರುತ್ತಿದ್ದಾರೆ.

ಸಂಘದ ಅಧ್ಯಕ್ಷ ಅಭಿಷೇಕ ಅಣಕಲ್, ನವೀನ ಹಿರದೊಡ್ಡೆ, ಸಾಗರ ಯಮ್ಹಾನ್, ಸಂದೀಪ ಎಕ್ಕಂಬೆ, ಅಭಿ ಹೊಲೆ, ಬಸವರಾಜ ಅಣಕಲ್, ಅಖಿಲೇಶ ಬಸವಗಲ್ಲಿ, ನರೇಶ ಎಗಲಂಬಿ, ಅಶ್ವಿನ್ ವಾಘಮಾರೆ, ಹಣಮಂತ ಕಲಖೋರಾ ಅವರು ಶಂಭು ಅವರ ಜತೆ ಸಕ್ರಿಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ’ಯುವ ಶಕ್ತಿಯನ್ನು ಸಾಮಾಜಿಕ ಕಾರ್ಯಗಳಿಗೆ ಬಳಸಿಕೊಂಡರೆ ಗ್ರಾಮಗಳ ಸುಧಾರಣೆ ಸಾಧ್ಯ’ ಎನ್ನುತ್ತಾರೆ ಶಂಭು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.