ADVERTISEMENT

ರೈಲು ಮಾರ್ಗ ವಿದ್ಯುತೀಕರಣ: ಇಂದಿನಿಂದ ಸಂಚಾರ ಆರಂಭ

​ಪ್ರಜಾವಾಣಿ ವಾರ್ತೆ
Published 23 ಜನವರಿ 2022, 16:07 IST
Last Updated 23 ಜನವರಿ 2022, 16:07 IST
ಭಗವಂತ ಖೂಬಾ
ಭಗವಂತ ಖೂಬಾ   

ಬೀದರ್‌: ‘ವಿಕಾರಾಬಾದ್‌ನಿಂದ ಪರಳಿಯ ವರೆಗಿನ 269 ಕಿ.ಮೀ ರೈಲು ಮಾರ್ಗ ₹262.12 ಕೋಟಿ ವೆಚ್ಚದಲ್ಲಿ ವಿದ್ಯುತೀಕರಣಗೊಂಡಿದೆ’ ಎಂದು ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.

‘269 ಕಿ.ಮೀ ಪೈಕಿ 105 ಕಿ.ಮೀ ವಿಕಾರಾಬಾದ್‌ನಿಂದ ಭಾಲ್ಕಿ ತಾಲ್ಲೂಕಿನ ಖಾನಾಪುರದವರೆಗೆ ವಿದ್ಯುತೀಕರಣ ಪ್ರಕ್ರಿಯೆ ಪೂರ್ಣಗೊಂಡು ರೈಲು ಪ್ರಯೋಗಿಕವಾಗಿ ಸಂಚರಿಸಿದೆ. ಈ ಮಾರ್ಗದಲ್ಲಿ ಸೋಮವಾರದಿಂದ (ಜ.24) ವಾರದಲ್ಲಿ ನಾಲ್ಕು ದಿನ ಬೀದರ್-ಯಶವಂತಪುರ (16571) ಹಾಗೂ ಯಶವಂತಪುರ-ಬೀದರ್ (16572) ನಡುವೆ ರೈಲು ಸಂಚರಿಸಲಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಬೀದರ್-ಹೈದರಾಬಾದ್ (17010), ಹೈದರಾಬಾದ್-ಬೀದರ್ ಇಂಟರ್‌ಸಿಟಿ (17009) ಹಾಗೂ ಬೀದರ್- ಮಚಲಿಪಟ್ನಂ (12750), ಮಚಲಿಪಟ್ನಂ-ಬೀದರ್ (12749) ರೈಲುಗಳು ವಿದ್ಯುತೀಕರಣ ಮಾರ್ಗದಲ್ಲಿ ಸಂಚರಿಸಲಿವೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

‘1934ರ ಜನವರಿ 14ರಂದು ಬೀದರ್‌ನಿಂದ ವಿಕಾರಬಾದ್‌ವರೆಗೆ ಮೊದಲ ರೈಲು ಸಂಚರಿಸಿತ್ತು. 88 ವರ್ಷಗಳ ನಂತರ ವಿದ್ಯುತೀಕರಣ ಮೂಲಕ ರೈಲು ಸಂಚರಿಸಲಿದೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.