ADVERTISEMENT

ಉಕ್ಕಿಹರಿದ ಹಳ್ಳ: ಸೇತುವೆ ಮುಳುಗಡೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2022, 2:54 IST
Last Updated 5 ಆಗಸ್ಟ್ 2022, 2:54 IST
ಔರಾದ್ ತಾಲ್ಲೂಕಿನ ವಡಗಾಂವ್ ಗ್ರಾಮದಲ್ಲಿ ಭಾರಿ ಮಳೆಯಿಂದ ಬಸವ ಮಂಟಪದಲ್ಲಿ ನೀರು ನುಗ್ಗಿದೆ
ಔರಾದ್ ತಾಲ್ಲೂಕಿನ ವಡಗಾಂವ್ ಗ್ರಾಮದಲ್ಲಿ ಭಾರಿ ಮಳೆಯಿಂದ ಬಸವ ಮಂಟಪದಲ್ಲಿ ನೀರು ನುಗ್ಗಿದೆ   

ಕಮಲನಗರ: ತಾಲ್ಲೂಕಿನಾದ್ಯಂತ ಗುರುವಾರ ಸತತವಾಗಿ ಎರಡು ಗಂಟೆ ಮಳೆ ಸುರಿದಿದ್ದರಿಂದ ಹಳ್ಳಕೊಳ್ಳಗಳು ತುಂಬಿ ಹರಿದವು.

ಮಳೆಗೆ ನೀರು ಉಕ್ಕಿ ಹರಿದ ಹಳ್ಳ ಚಂದನವಾಡಿ ಗ್ರಾಮದ ಕೆಲವು ಮನೆಗಳಿಗೆ ನೀರು ನುಗ್ಗಿದೆ. ಸೋನಾಳವಾಡಿ-ಹುಲಸೂರು, ಕಳಗಾಪುರ– ಸಂಗಮ, ಡಿಗ್ಗಿ- ಚ್ಯಾಂಡೇಶ್ವರ, ಮುರ್ಕಿ-ಚಿಕ್ಲಿ(ಯು), ಬೆಳಕುಣಿ-ಡೋಣಗಾಂವ್(ಎಂ), ಡೋಣಗಾಂವ್– ಹಂದಿಕೇರಾ ಮತ್ತು ಕಮಲನಗರ-ರಾಂಪುರ ನಡುವಿನ ಸೇತುವೆಗಳು ಮುಳುಗಡೆ ಯಾಗಿವೆ. ಇದರಿಂದ ಈ ಗ್ರಾಮಗ ಳಲ್ಲಿಸಂಪರ್ಕಕಂಡಿತ ಗೊಂಡಿದೆ.

ತಾಲ್ಲೂಕಿನ ಸೋನಾಳ, ಸೋನಾಳವಾಡಿ, ಡಿಗ್ಗಿ, ಕಮಲನಗರ, ತೋರಣಾ, ಡೋಣಗಾಂವ್, ಬೆಳಕುಣಿ, ದಾಬಕಾ ಸೇರಿದಂತೆ ಇತರೆಡೆ ವ್ಯಾಪಕವಾಗಿ ಮಳೆಯಾಗಿದೆ ಎಂದು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಮಹಾದೇವ ಪಾಟೀಲ ತಿಳಿಸಿದರು.

ADVERTISEMENT

ಹಳ್ಳಕೊಳ್ಳಗಳು ತುಂಬಿಹರಿದು ತಗ್ಗು ಪ್ರದೇಶದ ಜಮೀನುಗಳಿಗೆ ನೀರು ನುಗ್ಗಿದೆ. ಇದರಿಂದ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆಗಳು ಜಲಾವೃತವಾಗಿವೆ ಎಂದು ಸೋನಾಳ ಗ್ರಾಮದ ಅಂಕುಶ ಹಣಮಶೇಟ್ಟೆ ಹೇಳಿದರು.

ಶಿವನ ಪ್ರತಿಮೆ ಸುತ್ತ ನೀರು

ಔರಾದ್: ತಾಲ್ಲೂಕಿನ ಸಂತಪುರ ಹೋಬಳಿಯ ವಿವಿಧೆಡೆ ಗುರುವಾರ ಸಂಜೆ ಭಾರಿ ಮಳೆಯಾಗಿದೆ.

ವಡಗಾಂವ್ ಗ್ರಾಮದಲ್ಲಿ ರಸ್ತೆ ಮೇಲೆ ನೀರು ಹರಿದು ಸಂಚಾರ ಅಡೆಚಣೆಯಾಯಿತು. ಕೆಲವು ಮನೆಗಳಿಗೂ ನೀರು ನುಗ್ಗಿದೆ.

ಗ್ರಾಮದ ಬಸವ ಮಂಟಪದಲ್ಲೂ ನೀರು ಬಂದು ಶಿವನ ಪ್ರತಿಮೆ ಸುತ್ತ ನೀರು ನಿಂತಿದೆ. ಬೋರಳ ಗ್ರಾಮದಲ್ಲೂ ಮನೆಗಳಿಗೆ ನೀರು ನುಗ್ಗಿದೆ. ಸತತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಾಂಜ್ರಾ ನದಿ ನೀರು ಒಳ ಹರಿವು ಜಾಸ್ತಿಯಾಗಿದೆ. ಇದರಿಂದಾಗಿ ನದಿ ಪಾತ್ರದ ಜನರಲ್ಲಿ ಆತಂಕ ಶುರುವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.