ADVERTISEMENT

ಬಿಪಿನ್ ರಾವತ್ ಸೇವೆ ಸ್ಫೂರ್ತಿದಾಯ: ರೇವಣಸಿದ್ದ ಜಾಡರ್

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2021, 4:35 IST
Last Updated 12 ಡಿಸೆಂಬರ್ 2021, 4:35 IST
ಹುಮನಾಬಾದ್ ಪಟ್ಟಣದ ಬಸವೇಶ್ವರ ವೃತದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಬಿಪಿನ ರಾವತ್ ಅವರಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು
ಹುಮನಾಬಾದ್ ಪಟ್ಟಣದ ಬಸವೇಶ್ವರ ವೃತದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಬಿಪಿನ ರಾವತ್ ಅವರಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು   

ಹುಮನಾಬಾದ್: ಹೆಲಿಕಾಪ್ಟರ್ ಅವಘಡದಲ್ಲಿ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರುಮೃತಪಟ್ಟದ್ದು ಅತ್ಯಂತ ದುಃಖಕರ ಸಂಗತಿ ಎಂದು ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ರೇವಣಸಿದ್ದ ಜಾಡರ್ ಹೇಳಿದರು.

ಬಸವೇಶ್ವರ ವೃತದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತೀಯ ಸೇನೆಯುಬಿಪಿನ್ ಅವರ ನಾಯಕತ್ವದಲ್ಲಿ ಪರಾಕ್ರಮ ಮೆರೆಯುತ್ತಿತ್ತು. ನಿಧನದ ಮೂಲಕ ರಾಷ್ಟ್ರವು ಒಬ್ಬ ಮಹಾನ್ ರಕ್ಷಣಾ ಹಾಗೂ ದೇಶಭಕ್ತನನ್ನು ಕಳೆದುಕೊಂಡಿದೆ. ಸ್ವೋರ್ಡ್ ಆಫ್ ಆನರ್‌ನಿಂದ ಸಿಡಿಎಸ್ ಹುದ್ದೆ ವರೆಗೂ ಅವರು ಮಾಡಿದ್ದ ಸೇವೆಯು ಭವಿಷ್ಯದ ಪೀಳಿಗೆಗೆ ಸ್ಫೂರ್ತಿಯಾಗಲಿದೆ ಎಂದರು.

ADVERTISEMENT

ಯುವ ಬ್ರಿಗೇಡ್ ಮುಖಂಡ ಲಕ್ಷ್ಮಿಕಾಂತ ಹಿಂದೂಡ್ಡಿ, ಮನೋಜ ಓಂಕಾರೆ, ಭಾಗ್ಯವಂತ ಸಾಗರ, ಆನಂದ ರೆಡ್ಡಿ, ಕೃಷ್ಣ ಆಶೀಶ ಖಂಡೆ, ಆನಂದ ಜಮಾದಾರ, ಭಾರತ ರಾಂಪುರೆ, ಅಪ್ಪು, ರಾಘವೇಂದ್ರ,ಶಿವು ಜಮಾದಾರ, ವೀರೇಶ ಪವಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.