ಬೀದರ್: ನಗರದಲ್ಲಿ ಭಾನುವಾರ ಬೆಳಿಗ್ಗೆ 'ರನ್ ಫಾರ್ ಫಿಟ್ ನೆಸ್' ಮ್ಯಾರಾಥಾನ್ ನಡೆಯಿತು.
ಬೀದರ್ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್.ಬಿ.ಐ) ಸಹಯೋಗದಲ್ಲಿ ಏರ್ಪಡಿಸಿದ್ದ ಮ್ಯಾರಾಥಾನ್ ನಲ್ಲಿ ಅಪಾರ ಸಂಖ್ಯೆಯ ಜನ ಭಾಗವಹಿಸಿ ಉತ್ಸಾಹದಿಂದ ಹೆಜ್ಜೆ ಹಾಕಿದರು.
ನಗರದ ಸಿದ್ದಾರೂಢ ಮಠದಿಂದ ಆರಂಭಗೊಂಡ ಮ್ಯಾರಾಥಾನ್, ಕುಂಬಾರವಾಡ ಕ್ರಾಸ್, ಮೈಲೂರ ಕ್ರಾಸ್, ರಾಮ ಚೌಕ್, ಬೊಮ್ಮಗೊಂಡೇಶ್ವರ ವೃತ್ತ, ಮಹಾವೀರ ವೃತ್ತ, ಶಿವಾಜಿ ವೃತ್ತ, ರೋಟರಿ ವೃತ್ತ, ಮಡಿವಾಳೇಶ್ವರ ವೃತ್ತದ ಮೂಲಕ ಹಾದು ಶಿವನಗರ ವಾಕಿಂಗ್ ಪಾಥ್ ಬಳಿ ಕೊನೆಗೊಂಡಿತು.
ಇದಕ್ಕೂ ಮುನ್ನ ಮ್ಯಾರಾಥಾನ್ ಗೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ನಶೆಮುಕ್ತ ಸಮಾಜ, ಸೈಬರ್ ಅಪರಾಧದ ಬಗ್ಗೆ ಜಾಗೃತಿ ಮೂಡಿಸಲು ಈ ಮ್ಯಾರಾಥಾನ್ ಹಮ್ಮಿಕೊಳ್ಳಲಾಗಿದೆ ಎಂದರು.
ಎಸ್.ಬಿ.ಐ. ಪ್ರಾದೇಶಿಕ ವ್ಯವಸ್ಥಾಪಕ ನಾಗರಾಜ್ ಮಾತನಾಡಿ, ಮಾನಸಿಕ,ದೈಹಿಕವಾಗಿಮನುಷ್ಯ ಸದೃಢರಾಗಿರುವುದು ಬಹಳ ಮುಖ್ಯ. ಆದಕಾರಣ ನಿತ್ಯ ಬೆಳಿಗ್ಗೆ ಯೋಗ, ವಾಕ್, ಏರೋಬಿಕ್ಸ್ ಮಾಡಬೇಕು. ಪೊಲೀಸರು, ಸೈನಿಕರಂತೆ ಶಿಸ್ತು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.