ADVERTISEMENT

ಮುಚಳಂಬ: ಡಿ.3 ರಿಂದ 9ರವರೆಗೆ ಸತ್ಸಂಗ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2022, 12:33 IST
Last Updated 2 ಡಿಸೆಂಬರ್ 2022, 12:33 IST
ಪ್ರಣವಾನಂದ ಸ್ವಾಮಿ
ಪ್ರಣವಾನಂದ ಸ್ವಾಮಿ   

ಮುಚಳಂಬ (ಹುಲಸೂರ): ‘ನಾಗಭೂಷಣ ಶಿವಯೋಗಿಗಳ 53ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಮುಚಳಂಬ ಗ್ರಾಮದ ನಾಗಭೂಷಣ ಶಿವಯೋಗಿಗಳ ಸಂಸ್ಥಾನ ಮಠದಲ್ಲಿ ಡಿ.3 ರಿಂದ 9ರವರೆಗೆ ಸತ್ಸಂಗ ಸಮ್ಮೇಳನ ನಡೆಯಲಿದೆ’ ಎಂದು ಪ್ರಣವಾನಂದ ಸ್ವಾಮಿ ತಿಳಿಸಿದರು.

ಶನಿವಾರ (ಡಿ.3) ಬೆಳಿಗ್ಗೆ 7.30ಕ್ಕೆ ನಾಗಭೂಷಣ ಶಿವಯೋಗಿಗಳು ಹಾಗೂ ಸಿದ್ಧಾರೂಢ ಮಹಾಸ್ವಾಮಿಗಳ ಮೂರ್ತಿಗಳ ಪಲ್ಲಕ್ಕಿ ಮೆರವಣಿಗೆ ಹಾಗೂ ಮಹಾಲಿಂಗೇಶ್ವರ ಸ್ವಾಮೀಜಿಯಿಂದ ಪ್ರಣವ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಬೆಳಿಗ್ಗೆ 9.30ಕ್ಕೆ ಪ್ರವಚನ ಕಾರ್ಯಕ್ರಮ ನಡೆಯಲಿದೆ. ಸಂಜೆ 5.20 ರಿಂದ 6.20ರವರೆಗೆ ಮುಚಳಂಬ ಹಾಗೂ ಧನ್ನೂರ ಕೆ.ಗ್ರಾಮದ ಭಕ್ತರಿಂದ ಸಿದ್ಧಾರೂಢ ಚರಿತಾಮೃತ ಪಾರಾಯಣ ಜರುಗಲಿದೆ.

ADVERTISEMENT

ಡಿ.4ರ ಬೆಳಿಗ್ಗೆ 9.30 ಹಾಗೂ ಸಂಜೆ 5.30, ಡಿ.5ರ ಬೆಳಿಗ್ಗೆ 9.30ಕ್ಕೆ ಪ್ರವಚನ ಕಾರ್ಯಕ್ರಮ ನಡೆಯಲಿದೆ. ಆಯುಸ್ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಅಂದು ಸಂಜೆ 5.30ಕ್ಕೆ ಪ್ರವಚನ ಕಾರ್ಯಕ್ರಮ ನಡೆಯಲಿದೆ. ಡಿ.6ರ ಬೆಳಿಗ್ಗೆ 9.30ಕ್ಕೆ ಪ್ರವಚನ ನಂತರ ವಿ.ಎಂ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಲಿದೆ. ಅಂದು ಸಂಜೆ 5.30ಕ್ಕೆ ‘ಅನುಪಮಾಚಲ ಭಕ್ತಿ ಭಾವಾನುಕೂಲನೆ ಶಂಭುಲಿಂಗ’ ವಿಷಯದ ಕುರಿತು ಪ್ರವಚನ ಕಾರ್ಯಕ್ರಮ ಜರುಗಲಿದೆ.

ಡಿ.7ರ ಬೆಳಿಗ್ಗೆ 9.30ಕ್ಕೆ ಪ್ರವಚನ ನಂತರ ಚಿರಾಯು ಆಸ್ಪತ್ರೆ ವತಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರ, ಸಂಜೆ 5.30ಕ್ಕೆ ಪ್ರವಚನ ಕಾರ್ಯಕ್ರಮ ನಡೆಯಲಿದೆ.

ಡಿ.8ರ ಬೆಳಿಗ್ಗೆ 9:30ಕ್ಕೆ ಪ್ರವಚನ ಬಳಿಕ ಕುರುಕೋಟೆ ಆಸ್ಪತ್ರೆ ವತಿಯಿಂದ ಎಲುಬು ಹಾಗೂ ಕೀಲಿನ ಉಚಿತ ತಪಾಸಣಾ ಶಿಬಿರ ನಡೆಯಲಿದೆ.

ಸಂಜೆ 5.30 ಹಾಗೂ ಡಿ.9ರ ಬೆಳಿಗ್ಗೆ 9.30ಕ್ಕೆ ಪ್ರವಚನ ಕಾರ್ಯಕ್ರಮ ನಡೆಯಲಿದೆ.

ಮುಕಾಂಬಿಕಾ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ಶಿಬಿರ ಹಾಗೂ ತುಲಾಭಾರ ಸೇವೆ ನಡೆಯಲಿದೆ ಎಂದು ಪ್ರಣವಾನಂದ ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.