ADVERTISEMENT

ಸ್ಕಿಜೋಫ್ರೇನಿಯಾ ಮಾನಸಿಕ ರೋಗ: ಡಿಎಚ್‌ಒ ಡಾ. ಎಂ.ಎ.ಜಬ್ಬಾರ್

​ಪ್ರಜಾವಾಣಿ ವಾರ್ತೆ
Published 24 ಮೇ 2019, 15:31 IST
Last Updated 24 ಮೇ 2019, 15:31 IST
ಬೀದರ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಸ್ಕಿಜೋಫ್ರೇನಿಯಾ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಎ.ಜಬ್ಬಾರ್ ಉದ್ಘಾಟಿಸಿದರು
ಬೀದರ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಸ್ಕಿಜೋಫ್ರೇನಿಯಾ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಎ.ಜಬ್ಬಾರ್ ಉದ್ಘಾಟಿಸಿದರು   

ಬೀದರ್: ‘ಸ್ಕಿಜೋಫ್ರೇನಿಯಾ ತಾರುಣ್ಯಾವಸ್ಥೆಯಲ್ಲಿ ಕಂಡು ಬರುವ ಮಾನಸಿಕ ರೋಗವಾಗಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಎ.ಜಬ್ಬಾರ್ ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗದ ವತಿಯಿಂದ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಸ್ಕಿಜೋಫ್ರೇನಿಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸ್ಕಿಜೋಫ್ರೇನಿಯಾ 15 ರಿಂದ 35 ವಯೋಮಾನದವರಲ್ಲಿ ಕಂಡು ಬರುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಶೇ 25 ರಷ್ಟು ಜನ ಸ್ಕಿಜೋಫ್ರೇನಿಯಾ ರೋಗಕ್ಕೆ ತುತ್ತಾಗುತ್ತಿದ್ದಾರೆ’ ಎಂದು ತಿಳಿಸಿದರು.

‘ಈ ರೋಗದಿಂದ ಬಳಲುತ್ತಿರುವವರು ತಪ್ಪು ಕಲ್ಪನೆಗಳಿಗೆ ಒಳಗಾಗಿ, ಚಿಕಿತ್ಸೆ ಪಡೆಯದೇ ದೆವ್ವ, ಭೂತ, ಹಿಂದಿನ ಜನ್ಮದ ಕರ್ಮಫಲ, ಪಾಪ ಎನ್ನುತ್ತ ಕಾಲ ಕಳೆಯುತ್ತಾರೆ. ಮಾಟ ಮಂತ್ರಗಳ ಮೊರೆ ಹೋಗಿ ತಮ್ಮ ಬದುಕನ್ನೇ ಮಾಡಿಕೊಳ್ಳುತ್ತಾರೆ. ಸ್ಕಿಜೋಫ್ರೇನಿಯಾ ಲಕ್ಷಣ ಕಂಡು ಬಂದರೆ ತಕ್ಷಣ ಮನೋರೋಗ ತಜ್ಞರನ್ನು ಸಂಪರ್ಕಿಸಬೇಕು’ ಎಂದು ತಿಳಿಸಿದರು.

ADVERTISEMENT

ಡಾ.ರಾಜಶೇಖರ ಪಾಟೀಲ ಮಾತನಾಡಿ,‘ಸ್ಕಿಜೋಫ್ರೇನಿಯಾ ಅನುವಂಶೀಯತೆ, ಪರಿಸರದ ಅಂಶಗಳು, ಗಾಂಜಾ, ಅಫೀಮು ಸೇವನೆಯಿಂದಲೂ ಬರುತ್ತದೆ’ ಎಂದು ಹೇಳಿದರು.

‘ಈ ರೋಗವು ರೋಗಿಯ ವ್ಯಕ್ತಿತ್ವವನ್ನು ಹಂತ ಹಂತವಾಗಿ ಕೆಡಿಸುತ್ತ ಹೋಗಿ ವ್ಯಕ್ತಿಯ ಭಾವನೆ, ವರ್ತನೆ ಮತ್ತು ನಡವಳಿಕೆಯಲ್ಲಿ ಬದಲಾವಣೆಯನ್ನು ಉಂಟು ಮಾಡುತ್ತದೆ’ ತಿಳಿಸಿದರು.

‘ವ್ಯಕ್ತಿಯು ಎಕಾಂತದಲ್ಲಿ ಕುಳಿತು ಸುಮ್ಮನೆ ಅಳುವುದು, ನಗುವುದು, ಭಾವನೆಗಳೇ ಇಲ್ಲದ ಹಾಗೆ ವರ್ತಿಸುವುದು, ಕಾಲ್ಪನಿಕ ಲೋಕದಲ್ಲಿ ಬದುಕುವುದು, ಅಸಂಬದ್ಧವಾದ ಪದಗಳನ್ನು ಬಳಸುವುದು, ಆತ್ಮಹತ್ಯೆಯಂತಹ ಕೃತ್ಯಗಳನ್ನು ಮಾಡುವುದು, ಇತರರನ್ನು ಕೊಲ್ಲಲು ಪ್ರಯತ್ನಿಸುವಂತಹ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವ ಲಕ್ಷಣಗಳು ಕಂಡು ಬಂದಲ್ಲಿ ಮೂಢನಂಬಿಕೆಗೆ ಒಳಗಾಗದೆ, ಮನೋವೈದ್ಯರನ್ನು ಸಂಪರ್ಕಿಸಬೇಕು’ ಎಂದು ಸಲಹೆ ನೀಡಿದರು.

ಡಾ.ಇಂದುಮತಿ ಪಾಟೀಲ, ಡಾ.ದೀಪಾ ಖಂಡ್ರೆ, ಡಾ.ಅನಿಲ ಚಿಂತಾಮಣಿ, ಡಾ.ಕೃಷ್ಣಾರೆಡ್ಡಿ, ಡಾ. ರವೀಂದ್ರ ಸಿರ್ಸಿ, ಡಾ.ಶಿವಶಂಕರ, ಡಾ.ಶಿವಕುಮಾರ, ಡಾ.ಮಾರ್ಥಂಡ್‌ರಾವ್‌ ಕಾಶೆಂಪೂರ, ಎಂ.ಅಬ್ದುಲ್ ಸಲೀಂ, ಮನೋರೋಗ ತಜ್ಞರಾದ ಡಾ.ಅಭಿಜಿತ ಪಾಟೀಲ, ಡಾ.ಪೂರ್ಣಿಮಾ ಶಳಕೆ, ಕಚೇರಿ ಮೇಲ್ವಿಚಾರಕ ವೀರಶೆಟ್ಟಿ ಚನಶೆಟ್ಟಿ, ಪ್ರಥಮ ದರ್ಜೆ ಸಹಾಯಕ ರಾಜೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.