ADVERTISEMENT

ಚಿಟಗುಪ್ಪ| ಸ್ವ–ಸಹಾಯ ಸಂಘಗಳಿಂದ ಸ್ವಾವಲಂಬನೆ: ಶಾಸಕ ಡಾ. ಸಿದ್ದು ಪಾಟೀಲ

ಆರೋಗ್ಯ ರಕ್ಷಾ ವಿಮೆಯ ಚೆಕ್‌ ವಿತರಣೆ: ಶಾಸಕ ಡಾ. ಸಿದ್ದು ಪಾಟೀಲ ಅಭಿಮತ

​ಪ್ರಜಾವಾಣಿ ವಾರ್ತೆ
Published 27 ಮೇ 2023, 11:23 IST
Last Updated 27 ಮೇ 2023, 11:23 IST
ಚಿಟಗುಪ್ಪ ಪಟ್ಟಣದಲ್ಲಿ ಶಾಸಕ ಡಾ.ಸಿದ್ದು ಪಾಟೀಲ ಅವರು ಸ್ವ ಸಹಾಯ ಸಂಘದ ಸದಸ್ಯರಿಗೆ ಆರೋಗ್ಯ ರಕ್ಷಾ ವಿಮೆಯ ಚೆಕ್‌ ವಿತರಿಸಿದರು
ಚಿಟಗುಪ್ಪ ಪಟ್ಟಣದಲ್ಲಿ ಶಾಸಕ ಡಾ.ಸಿದ್ದು ಪಾಟೀಲ ಅವರು ಸ್ವ ಸಹಾಯ ಸಂಘದ ಸದಸ್ಯರಿಗೆ ಆರೋಗ್ಯ ರಕ್ಷಾ ವಿಮೆಯ ಚೆಕ್‌ ವಿತರಿಸಿದರು   

ಚಿಟಗುಪ್ಪ: ‘ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸ್ವ–ಸಹಾಯ ಸಂಘಗಳ ಸದಸ್ಯತ್ವ ಪಡೆದುಕೊಂಡು ನಿಯಮ ಪಾಲನೆ ಮಾಡುವ ಮೂಲಕ ಹಣ ಉಳಿತಾಯ ಮಾಡುವುದರಿಂದ ಆರ್ಥಿಕ ಸ್ವಾವಲಂಬನೆ ಸಾಧಿಸಬಹುದು’ ಎಂದು ಶಾಸಕ ಡಾ. ಸಿದ್ದು ಪಾಟೀಲ ಹೇಳಿದರು.

ಇಲ್ಲಿಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ. ಟ್ರಸ್ಟ್‌ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಪ್ರಗತಿ ಬಂಧು ಹಾಗೂ ಸ್ವ ಸಹಾಯ ಸಂಘದ ಪಾಲುದಾರ ಫಲಾನುಭವಿಗಳಿಗೆ ಮಂಜೂರಾದ ಆರೋಗ್ಯ ರಕ್ಷಾ ವಿಮೆಯ ಚೆಕ್‌ ವಿತರಿಸಿ ಮಾತನಾಡಿದರು.

ಬಿಎಸ್‌ಎಸ್‌ಕೆ ನಿರ್ದೇಶಕ ಮಲ್ಲಿಕಾರ್ಜುನ ಪಾಟೀಲ ಮಾತನಾಡಿ,‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ರಾಜ್ಯದ ಎಲ್ಲೆಡೆ ಸ್ವ ಸಹಾಯ ಸಂಘಗಳನ್ನು ರಚಿಸುವ ಮೂಲಕ ಮಹಿಳೆಯರನ್ನು ಆರ್ಥಿಕ ಸಾಕ್ಷರರನ್ನಾಗಿಸುತ್ತಿರುವುದು ಹೆಮ್ಮೆಯ ಸಂಗತಿ’ ಎಂದರು.

ADVERTISEMENT

ಮಹಿಳೆಯರ ಸಂಘಗಳ ಅಭಿವೃದ್ಧಿಗೆ ಕುಟಂಬದ ಪುರುಷರು ಸಹಕರಿಸಬೇಕು. ಅವರ ಪ್ರಗತಿಗೆ ಪೂರಕವಾಗಿ ದುಡಿಯಬೇಕು. ಅಂದಾಗ ಮಾತ್ರ ಯೋಜನೆಯ ಯಶಸ್ಸು ಪಡೆಯಲು ಸಾಧ್ಯ ಎಂದು ಹೇಳಿದರು.

ಪ್ರವೀಣ, ಡಾ.ನೂಲಾ, ಬಸವರಾಜ, ಯೋಜನಾಧಿಕಾರಿ ವೀರೇಶ, ಶಾಮರಾವ್‌ ಮತ್ತು ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಸದಸ್ಯರು ಇದ್ದರು.

ಪುರುಷರ ಸಹಕಾರ ಅಗತ್ಯ ಸ್ವ–ಸಹಾಯ ಸಂಘಗಳ ಸದಸ್ಯರಾಗಿ ಪ್ರಗತಿಗೆ ಪೂರಕವಾಗಿ ದುಡಿಯಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.