ಬೀದರ್: ‘ಶಾಲಾ ಹಂತದಲ್ಲೇ ವಿದ್ಯಾರ್ಥಿಗಳಿಗೆ ಲೈಂಗಿಕ ಆರೋಗ್ಯ ಶಿಕ್ಷಣದ ಕುರಿತು ಅರಿವು ಮೂಡಿಸುವ ಅಗತ್ಯವಿದೆ. ಅದರಲ್ಲಿ ಶಿಕ್ಷಕರ ಪಾತ್ರ ಬಹಳ ಮಹತ್ವದ್ದಾಗಿದೆ’ ಎಂದು ಎಫ್‌ಪಿಎಐ ಸಂಸ್ಥೆ ಮಾಜಿ ರಾಷ್ಟ್ರೀಯ ಉಪಾಧ್ಯಕ್ಷೆ ಪೂರ್ಣಿಮಾ ಜಿ. ತಿಳಿಸಿದರು.
ಭಾರತೀಯ ಕುಟುಂಬ ಯೋಜನಾ ಸಂಘ (ಎಫ್‌ಪಿಎಐ) ಶಾಖೆಯಿಂದ ನಗರದಲ್ಲಿ ಇತ್ತೀಚಿಗೆ ತಾಲ್ಲೂಕಿನ ಪ್ರೌಢಶಾಲಾ ಶಿಕ್ಷಕರಿಗೆ ಹದಿಹರೆಯದವರ ‘ಸಮಗ್ರ ಲೈಂಗಿಕ ಆರೋಗ್ಯ ಶಿಕ್ಷಣ’ ಕುರಿತು ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯುವ ಜನಾಂಗ ನಮ್ಮ ದೇಶದ ಆಸ್ತಿ. ಮಕ್ಕಳಿಗೆ ಶಾಲಾ ಹಂತದಲ್ಲೇ ದೈಹಿಕ, ಮಾನಸಿಕ ಆರೋಗ್ಯದ ಜೊತೆ ಜೊತೆಗೆ ಲೈಂಗಿಕ ಆರೋಗ್ಯ ಶಿಕ್ಷಣದ ಕುರಿತು ತಿಳಿಸಬೇಕು. ಅದರಿಂದ ಅವರು ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಸಂಸ್ಥೆಯ ಅಧ್ಯಕ್ಷ ಡಾ. ನಾಗೇಶ ಪಾಟೀಲ್ ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಬಹು ಮುಖ್ಯವಾಗಿದೆ ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿ ಸಂಘದ ಜಿಲ್ಲಾ ಅಧ್ಯಕ್ಷ ರಾಜೇಂದ್ರ ಮಣಿಗಿರೆ ಮಾತನಾಡಿ, ಎಫ್‌ಪಿಎಐ ಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.
ಎಫ್‌ಪಿಎಐ ಸಂಸ್ಥೆಯ ಉಪಾಧ್ಯಕ್ಷೆ ಡಾ. ಸವಿತಾ ಚಾಕೋತೆ, ಬ್ರಿಮ್ಸ್ ಮನೋರೋಗ ತಜ್ಞರಾದ ಡಾ. ಶ್ವೇತಾ ಕುಣಿಕೇರಿ, ಡಾ. ರಾಘವೇಂದ್ರ ವಾಘೋಲೆ, ಶಾಖೆಯ ವ್ಯವಸ್ಥಾಪಕ ಶ್ರೀನಿವಾಸ ಬಿರಾದಾರ, ನಿವೃತ್ತ ಉಪನ್ಯಾಸಕ ಟಿ. ಜೆ. ಹಾದಿಮನಿ, ಡಾ. ಶ್ರೇಯಾ ಮಹೇಂದ್ರಕರ್,
ವಿದ್ಯಾವಿಕಾಸ ಕಾಲೇಜಿನ ಉಪನ್ಯಾಸಕಿ ರೂಪಾಲಿ, ರೋಟರಿ ಕ್ವೀನ್ಸ್‌ನ ಅಧ್ಯಕ್ಷೆ ಡಾ. ಸುಜಾತಾ ಹೊಸಮನಿ ಮಾತನಾಡಿದರು. 40ಕ್ಕೂ ಹೆಚ್ಚು ಆಯ್ದ ಪ್ರೌಢಶಾಲೆಯ ಶಿಕ್ಷಕ/ಶಿಕ್ಷಕಿಯರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.