ಚಿಟಗುಪ್ಪ: ಇಲ್ಲಿಯ ಗಾಂಧಿ ಚೌಕ್‌ನಲ್ಲಿ ಗುರುವಾರ ರಾತ್ರಿ ಅಂಗಡಿಯೊಂದರಲ್ಲಿ ಉಂಟಾದ ಶಾರ್ಟ್ ಸರ್ಕಿಟ್‌ನಿಂದಾಗಿ ಮೂರು ಅಂಗಡಿಗಳಲ್ಲಿ ಅಪಾರ ಹಾನಿ ಸಂಭವಿಸಿದೆ.
ಅಬ್ದುಲ್ ನಬಿಸಾಬ್, ಅಕ್ರಮ್ ನಬಿಸಾಬ್ ಎಂಬುವರ ಎರಡು ಬಟ್ಟೆ ಅಂಗಡಿಗಳು, ನಾಗೇಶ್ ಮಾಣಿಕರಾವ್ ಎಂಬುವರ ಒಂದು ಜನರಲ್ ಸ್ಟೋರ್ ಅಂಗಡಿಯಲ್ಲಿನ ವಸ್ತುಗಳು ಸುಟ್ಟು ಭಸ್ಮವಾಗಿವೆ.
ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಈ ಕುರಿತು ಪಟ್ಟಣ ಠಾಣೆಯಲ್ಲಿ ದಾಖಲಿಸಿದ ದೂರಿನಲ್ಲಿ ಒಟ್ಟು ₹38 ಲಕ್ಷ ಮೊತ್ತದ ಹಾನಿಯಾಗಿದೆ ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.