ADVERTISEMENT

ವಿವಿಧೆಡೆ ಶ್ರದ್ಧೆ, ಭಕ್ತಿಯ ಕೃಷ್ಣ ಜನ್ಮಾಷ್ಟಮಿ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 15:20 IST
Last Updated 19 ಆಗಸ್ಟ್ 2022, 15:20 IST
ಬೀದರ್‌ನ ಸರಸ್ವತಿ ಶಾಲೆಯಲ್ಲಿ ನಡೆದ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಕೃಷ್ಣನ ತೊಟ್ಟಿಲು ಇಡಲಾಯಿತು
ಬೀದರ್‌ನ ಸರಸ್ವತಿ ಶಾಲೆಯಲ್ಲಿ ನಡೆದ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಕೃಷ್ಣನ ತೊಟ್ಟಿಲು ಇಡಲಾಯಿತು   


ಬೀದರ್: ಕೃಷ್ಣ ಜನ್ಮಾಷ್ಟಮಿಯನ್ನು ನಗರದ ವಿವಿಧೆಡೆ ಶ್ರದ್ಧೆ, ಭಕ್ತಿಯಿಂದ ಆಚರಿಸಲಾಯಿತು.
ಸರಸ್ವತಿ ಶಾಲೆ: ನಗರದ ಸರಸ್ವತಿ ಶಾಲೆಯ ಗಿರಿಜಾ ಭವನದಲ್ಲಿ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಕೃಷ್ಣನ ತೊಟ್ಟಿಲು, ಕೃಷ್ಣ- ರಾಧೆ ವೇಷಧಾರಿ ಮಕ್ಕಳಿಂದ ನೃತ್ಯ, ಸಿಹಿ ವಿತರಣೆ ಕಾರ್ಯಕ್ರಮಗಳು ನಡೆದವು.
ಸಾಹಿತಿ ರೂಪಾ ಪಾಟೀಲ ಮಾತನಾಡಿದರು. ಸರಸ್ವತಿ ಶಿಕ್ಷಣ ವಿಕಾಸ ಸಮಿತಿಯ ಅಧ್ಯಕ್ಷ ಪ್ರೊ. ಎಸ್.ಬಿ. ಸಜ್ಜನಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಸದಸ್ಯ ನಾರಾಯಣರಾವ್ ಮುಖೇಡಕರ್, ಆಡಳಿತಾಧಿಕಾರಿ ಗುರುನಾಥ ಮೂಲಗೆ, ವಿದ್ಯಾರಣ್ಯ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಪ್ರತಿಭಾ ಚಾಮಾ, ಸರಸ್ವತಿ ಹಿರಿಯ ಪ್ರಾಥಮಿಕ ಶಾಲೆಯ ಅರುಣಾ ಪಾಟೀಲ ಇದ್ದರು.
ಸ್ವಾತಿ ವಿನಾಯಕ ಸ್ವಾಗತಿಸಿದರು. ಸುಧಾ ಕಲ್ಲಪ್ಪ ನಿರೂಪಿಸಿದರು. ವರ್ಷಾ ಅಮೀತಕುಮಾರ ವಂದಿಸಿದರು.
ಮಡಿವಾಳೇಶ್ವರ ಶಾಲೆ: ನಗರದ ಮಡಿವಾಳೇಶ್ವರ ಶಾಲೆಯಲ್ಲಿ ನಡೆದ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಕೃಷ್ಣ-ರಾಧೆ ವೇಷಧಾರಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕರ್ನಾಟಕ ಕಾಲೇಜಿನ ಪ್ರಾಧ್ಯಾಪಕಿ ಡಾ. ಸುನಿತಾ ಕೂಡ್ಲಿಕರ್ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಪ್ರೊ. ಎಸ್.ಬಿ. ಸಜ್ಜನಶೆಟ್ಟಿ, ಸದಸ್ಯ ರಾಮಕೃಷ್ಣ ಸಾಳೆ, ಅಡಳಿತಾಧಿಕಾರಿ ಗುರುನಾಥ ಮೂಲಗೆ, ಪ್ರೌಢಶಾಲೆ ಮುಖ್ಯಶಿಕ್ಷಕ ಶಿವಶರಣಪ್ಪ ಪಾಟೀಲ, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಅರ್ಚನಾ ಸಿರಿಗೆರಿ ಉಪಸ್ಥಿತರಿದ್ದರು. ಸ್ನೇಹ ನಿರೂಪಿಸಿದರು. ಶಲೀನಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.