ಬಸವಕಲ್ಯಾಣ: ನಗರದ ಬನಶಂಕರಿ ಓಣಿಯ ನಿವಾಸಿ ಹಾಗೂ ವ್ಯಾಪಾರಿ ಮಹೇಶ ಸುಂಟನೂರೆ (45) ಗೋವಾದ ಕಲಂಗುಟ್ ಲಾಡ್ಜ್‌ವೊಂದರಲ್ಲಿ ಸೋಮವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶನಿವಾರ ಅಲ್ಲಿನ ಲಾಡ್ಜ್‌ನ ಕೊಠಡಿಯಲ್ಲಿ ಮಹೇಶ ಹಾಗೂ ನಗರದವರೇ ಆಗಿರುವ ಮಹಿಳೆಯೊಬ್ಬಳು ಉಳಿದುಕೊಂಡಿದ್ದರು. ಮಹೇಶ ಕೊಠಡಿಯ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಿಳೆ ಸಹ ಆತ್ಮಹತ್ಯೆಗೆ ಯತ್ನಿಸಿದ್ದು ಆಕೆಯ ಸ್ಥಿತಿ ಗಂಭೀರವಾಗಿದ್ದರಿಂದ ಅಲ್ಲಿನ ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಗೋವಾ ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ವಿಷಯ ಗೊತ್ತಾಗಿದ್ದರಿಂದ ಮಹೇಶನ ಸಂಬಂಧಿಕರು ಸೋಮವಾರ ಗೋವಾಕ್ಕೆ ಹೋಗಿರುವ ಬಗ್ಗೆ ಆತನ ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.