ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ: 1,680 ಅಭ್ಯರ್ಥಿಗಳು ಗೈರು

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2019, 10:52 IST
Last Updated 26 ಮಾರ್ಚ್ 2019, 10:52 IST

ಬೀದರ್‌: ಜಿಲ್ಲೆಯಲ್ಲಿ ಸೋಮವಾರ ನಡೆದ ಎಸ್ಸೆಸ್ಸೆಲ್ಸಿ ಗಣಿತ ವಿಷಯದ ಪರೀಕ್ಷೆಗೆ 1,680 ವಿದ್ಯಾರ್ಥಿಗಳು ಗೈರು ಹಾಜರಾದರು.

ನೋಂದಣಿಯಾದ 26,909 ವಿದ್ಯಾರ್ಥಿಗಳಲ್ಲಿ 25,229 ವಿದ್ಯಾರ್ಥಿಗಳು ಮಾತ್ರ ಪರೀಕ್ಷೆ ಬರೆದರು.

ಔರಾದ್ ತಾಲ್ಲೂಕಿನಲ್ಲಿ 3,126 ವಿದ್ಯಾರ್ಥಿಗಳಲ್ಲಿ 2,959 ವಿದ್ಯಾರ್ಥಿಗಳು ಹಾಜರಾಗಿದ್ದು, 167 ಮಂದಿ ಗೈರು ಹಾಜರಾದರು. ಭಾಲ್ಕಿ ತಾಲ್ಲೂಕಿನಲ್ಲಿ 4,226 ವಿದ್ಯಾರ್ಥಿಗಳಲ್ಲಿ 4,098 ವಿದ್ಯಾರ್ಥಿಗಳು ಹಾಜರಾಗಿದ್ದು, 128 ಜನ ಗೈರು ಹಾಜರಾದರು. ಬಸವಕಲ್ಯಾಣದಲ್ಲಿ 5,661 ವಿದ್ಯಾರ್ಥಿಗಳ ಪೈಕಿ 5,419 ಮಂದಿ ಪರೀಕ್ಷೆ ಬರೆದಿದ್ದು, 242 ವಿದ್ಯಾರ್ಥಿಗಳು ಗೈರು ಹಾಜರಾದರು. ಬೀದರ್‌ ತಾಲ್ಲೂಕಿನಲ್ಲಿ 8,525 ವಿದ್ಯಾರ್ಥಿಗಳಲ್ಲಿ 7,619 ವಿದ್ಯಾರ್ಥಿಗಳು ಹಾಜರಾಗಿದ್ದು, 906 ಜನ ಗೈರು ಹಾಜರಾದರು. ಹುಮನಾಬಾದ್ ತಾಲ್ಲೂಕಿನಲ್ಲಿ 5,371 ವಿದ್ಯಾರ್ಥಿಗಳಲ್ಲಿ 5,134 ವಿದ್ಯಾರ್ಥಿಗಳು ಹಾಜರಾಗಿದ್ದು, 237 ಜನ ಗೈರು ಹಾಜರಾದರು.

ADVERTISEMENT

ಕೇಂದ್ರಕ್ಕೆ ಡಿಡಿಪಿಐ ಭೇಟಿ: ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಚ್.ಸಿ.ಚಂದ್ರಶೇಖರ ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಬೀದರ್‌ನ ವಿಜಡಂ ಪ್ರೌಢಶಾಲೆ, ಅಲ್ ಅಮೀನ್ ಪ್ರೌಢಶಾಲೆ, ಬಗದಲ್ ಸರ್ಕಾರಿ ಪ್ರೌಢಶಾಲೆ, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪರೀಕ್ಷಾ ಕೇಂದ್ರಗಳಿಗೆ ಅನಿರೀಕ್ಷಿತ ಭೇಟಿ ನೀಡಿದರು.

ಹಾಜರಾದ ಮಕ್ಕಳ ಹಾಜರಾತಿ ವಿವರ, ಆಸನ ವ್ಯವಸ್ಥೆ, ಮಕ್ಕಳ ಪ್ರವೇಶ ಪತ್ರ, ಪ್ರಶ್ನೆ ಪತ್ರಿಕೆ ಹಾಗೂ ಪೋಲಿಸ್ ಬಂದೋಬಸ್ತ್ ವ್ಯವಸ್ಥೆಯನ್ನು ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.