ADVERTISEMENT

ಗ್ಲೋಬಲ್ ಸೈನಿಕ ಅಕಾಡೆಮಿಯಲ್ಲಿ ಬೇಸಿಗೆ ಶಿಬಿರ ಸಮಾರೋಪ

​ಪ್ರಜಾವಾಣಿ ವಾರ್ತೆ
Published 19 ಮೇ 2022, 7:05 IST
Last Updated 19 ಮೇ 2022, 7:05 IST
ಗ್ಲೋಬಲ್‌ ಸೈನಿಕ ಅಕಾಡೆಮಿ ಆಯೋಜಿಸಿದ್ದ ಬೇಸಿಗೆ ಶಿಬಿರದ ‍ಪ್ರಯುಕ್ತ ಭಾಲ್ಕಿ ತಾಲ್ಲೂಕಿನ ಖಾನಾಪುರ ಸಮೀಪದ ಬ್ಲ್ಯಾಕ್‌ ಬಕ್ ರೆಸಾರ್ಟ್‌ ಪ್ರದೇಶದಲ್ಲಿ ಚಾರಣ ಮಾಡಿದ ಮಕ್ಕಳು
ಗ್ಲೋಬಲ್‌ ಸೈನಿಕ ಅಕಾಡೆಮಿ ಆಯೋಜಿಸಿದ್ದ ಬೇಸಿಗೆ ಶಿಬಿರದ ‍ಪ್ರಯುಕ್ತ ಭಾಲ್ಕಿ ತಾಲ್ಲೂಕಿನ ಖಾನಾಪುರ ಸಮೀಪದ ಬ್ಲ್ಯಾಕ್‌ ಬಕ್ ರೆಸಾರ್ಟ್‌ ಪ್ರದೇಶದಲ್ಲಿ ಚಾರಣ ಮಾಡಿದ ಮಕ್ಕಳು   

ಬೀದರ್‌: ಗ್ಲೋಬಲ್ ಸೈನಿಕ ಅಕಾಡೆಮಿಯಲ್ಲಿ ಹದಿನೈದು ದಿನಗಳ ವರೆಗೆ ನಡೆದ ಬೇಸಿಗೆ ಶಿಬಿರದ ಸಮಾರೋಪ ಕಾರ್ಯಕ್ರಮ ಈಚೆಗೆ ನಡೆಯಿತು.

ಶಿಬಿರದಲ್ಲಿ ಮಕ್ಕಳಿಗೆ ಶೂಟಿಂಗ್, ಈಜು, ಸ್ಕೇಟಿಂಗ್, ನೃತ್ಯ, ಸಂಗೀತ, ಚಿತ್ರಕಲೆ, ಚಾರಣ ತರಬೇತಿ ನೀಡಲಾಯಿತು. ಭಾಲ್ಕಿ ತಾಲ್ಲೂಕಿನ ಖಾನಾಪುರ ಸಮೀಪದ ಬ್ಲ್ಯಾಕ್‌ ಬಕ್ ರೆಸಾರ್ಟ್‌ ಪ್ರದೇಶದಲ್ಲಿ ಚಾರಣ ನಡೆಯಿತು.

ಸಮಾರೋಪ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿದ್ದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘದ ನಿರ್ದೇಶಕ ರೇವಣಸಿದ್ಧಪ್ಪ ಜಲಾದೆ ಮಾತನಾಡಿ, ಗ್ಲೋಬಲ್‌ ಸೈನಿಕ ಅಕಾಡೆಮಿಯು ರಜಾ ಅವಧಿಯಲ್ಲಿ ಶಿಬಿರ ಆಯೋಜಿಸಿ ಮಕ್ಕಳಿಗೆ ಹೊಸ ಅನುಭವ ಮಾಡಿಸಿದೆ ಎಂದರು.

ADVERTISEMENT

ಗ್ಲೋಬಲ್ ಸೈನಿಕ ಅಕಾಡೆಮಿಯ ಅಧ್ಯಕ್ಷ ಕರ್ನಲ್ ಶರಣಪ್ಪ ಸಿಕೇನಪುರ ಮಾತನಾಡಿ, ಮಕ್ಕಳ ಪ್ರತಿಭೆ ಗುರುತಿಸುವುದು ಹಾಗೂ ಅವರಲ್ಲಿನ ಆತ್ಮವಿಶ್ವಾಸ ಹೆಚ್ಚಿಸುವುದು ಶಿಬಿರದ ಉದ್ದೇಶವಾಗಿದೆ ಎಂದರು.

ವಾಣಿಜ್ಯ ತೆರಿಗೆ ಅಧಿಕಾರಿ ಬೋಲಜಿ ಪಾಟೀಲ ಮಾತನಾಡಿದರು. ಗೌರವ ಅತಿಥಿಗಳಾಗಿ ಪ್ರಾಚಾರ್ಯ ಮಿಥಿಲೇಶ್ ಕುಮಾರ, ಬಂಡೆಪ್ಪ ಗಡ್ಡೆ, ಇವ್ಲಿನ್ ಜಾರ್ಜ್, ಕಾರಂಜಿ ಸ್ವಾಮಿ, ರಾಮ್ ದವಲಜೆ, ಮಡೆಪ್ಪ, ಅಶೋಕ ಪಾಟೀಲ, ಡಾ.ಆರತಿ ರಘು ಮತ್ತು ಡಾ.ಶರಣ ಬುಳ್ಳ, ಡಾ. ಶಿಲ್ಪಾ ಬುಳ್ಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.