ADVERTISEMENT

ಎಟಿಎಂ ಒಡೆದು ಹಣ ಕದ್ದ ಕಳ್ಳರು

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2021, 14:39 IST
Last Updated 8 ಆಗಸ್ಟ್ 2021, 14:39 IST
ಬೀದರ್‌ನ ಗುಂಪಾದಲ್ಲಿರುವ ಎಕ್ಸಿಸ್‌ ಬ್ಯಾಂಕ್‌ ಎಟಿಎಂ ಬಳಿ ಪೊಲೀಸರು ಪರಿಶೀಲನೆ ನಡೆಸುತ್ತಿರುವುದು
ಬೀದರ್‌ನ ಗುಂಪಾದಲ್ಲಿರುವ ಎಕ್ಸಿಸ್‌ ಬ್ಯಾಂಕ್‌ ಎಟಿಎಂ ಬಳಿ ಪೊಲೀಸರು ಪರಿಶೀಲನೆ ನಡೆಸುತ್ತಿರುವುದು   

ಬೀದರ್‌: ನಗರದ ಗುಂಪಾದಲ್ಲಿ ಭಾನುವಾರ ಬೆಳಗಿನ ಜಾವ ಕಳ್ಳರು ಎಕ್ಸಿಸ್‌ ಬ್ಯಾಂಕ್‌ ಎಟಿಎಂ ಒಡೆದು ಅಂದಾಜು ಮೂರೂವರೆ ಲಕ್ಷ ರೂಪಾಯಿ ಕದ್ದೊಯ್ದಿದ್ದಾರೆ.

ಎಟಿಎಂ ಒಳಗಡೆ ಸಿಸಿಟಿವಿ ಕ್ಯಾಮೆರಾ ಇಲ್ಲ. ಹೀಗಾಗಿ ಪಕ್ಕದ ಕಟ್ಟಡದಲ್ಲಿರುವ ಸಿಸಿಕ್ಯಾಮೆರಾಗಳ ಮೂಲಕ ಪೊಲೀಸರು ತಪಾಸಣೆ ನಡೆಸಿದ್ದಾರೆ. ಸಾಮಾನ್ಯವಾಗಿ ಶನಿವಾರ ಎಟಿಎಂಗಳಲ್ಲಿ ಹಣ ತುಂಬಲಾಗುತ್ತದೆ. ಆದರೆ, ಈ ವಾರ ಹಣ ಹಾಕಿರಲಿಲ್ಲ ಎನ್ನಲಾಗಿದೆ.

ಬ್ಯಾಂಕಿನ ಅಧಿಕಾರಿ ಗಾಂಧಿ ಗಂಜ್‌ ಪೊಲೀಸರಿಗೆ ದೂರು ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.