ADVERTISEMENT

ಮತ ಅಸಿಂಧುಗೆ ಅವಕಾಶ ಬೇಡ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2021, 6:01 IST
Last Updated 5 ಡಿಸೆಂಬರ್ 2021, 6:01 IST
ಭಾಲ್ಕಿಯ ಪುರಸಭೆಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಿಧಾನ ಪರಿಷತ್‍ ಚುನಾವಣೆಯ ಮತದಾನ ಕುರಿತು ಮಾಹಿತಿ ನೀಡಿದ ಪುರಸಭೆ ಮುಖ್ಯಾಧಿಕಾರಿ ಡಾ.ಶಿವರಾಜ ರಾಠೋಡ್
ಭಾಲ್ಕಿಯ ಪುರಸಭೆಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಿಧಾನ ಪರಿಷತ್‍ ಚುನಾವಣೆಯ ಮತದಾನ ಕುರಿತು ಮಾಹಿತಿ ನೀಡಿದ ಪುರಸಭೆ ಮುಖ್ಯಾಧಿಕಾರಿ ಡಾ.ಶಿವರಾಜ ರಾಠೋಡ್   

ಭಾಲ್ಕಿ: ಸ್ಥಳೀಯ ಸಂಸ್ಥೆಯ ವಿಧಾನ ಪರಿಷತ್ ಚುನಾವಣೆಯ ಮತದಾನವು ಡಿಸೆಂಬರ್‌ 10ರಂದು ನಡೆಯಲಿದ್ದು, ಕ್ಷೇತ್ರದಿಂದ ಮತಗಳು ಅಸಿಂಧು ಆಗದಂತೆ ಎಚ್ಚರಿಕೆ ವಹಿಸಿ, ಮತ ಚಲಾಯಿಸುವಂತೆ ಪುರಸಭೆ ಮುಖ್ಯಾಧಿ ಕಾರಿ ಡಾ.ಶಿವರಾಜ ರಾಠೋಡ್ ಅವರು ಸದಸ್ಯರಿಗೆ ಸೂಚಿಸಿದರು.

ಇಲ್ಲಿನ ಪುರಸಭೆಯ ಸಭಾಂಗಣದಲ್ಲಿ ವಿಧಾನ ಪರಿಷತ್‍ ಚುನಾವಣೆಯ ಸಿಂಧು ಮತ್ತು ಅಸಿಂಧು ಮತದಾನದ ಮಾದರಿ ಮತಪತ್ರಗಳ ಪ್ರತ್ಯಕ್ಷ ನೀಡಿ ಮತದಾನ ಮಾಡುವ ವಿಧಾನ ಕುರಿತು ಸದಸ್ಯರಿಗೆ ಮಾಹಿತಿ ನೀಡಿದರು.

ಮೊದಲನೇ ಪ್ರಾಶಸ್ತ್ಯವಾಗಿ ಯಾವ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳುತ್ತಿರೋ ಆ ಅಭ್ಯರ್ಥಿಯ ಹೆಸರಿನ ಮುಂದೆ ಅಂಕಿಯಲ್ಲಿ 1 ಎಂದು ಗುರುತು ಮಾಡಬೇಕು. ಅಂಕಿಗಳಲ್ಲಿ ಪ್ರಾಶಸ್ತ್ಯ ನೀಡಬೇಕು, ಹೊರತು ಅಕ್ಷರಗಳಲ್ಲಿ ಬರೆಯಬಾರದು ಎಂದರು.

ADVERTISEMENT

ಸ್ಪರ್ಧಿಸಿರುವ ಅಭ್ಯರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪ್ರಾಶಸ್ತ್ಯಗಳನ್ನು ಗುರುತು ಹಾಕಬಹುದು. ಮತಪತ್ರದ ಮೇಲೆ ನಿಮ್ಮ ಹೆಸರು ಅಥವಾ ಯಾವುದೇ ಪದಗಳನ್ನು ಬರೆಯಬೇಡಿ. ಒಬ್ಬ ಅಭ್ಯರ್ಥಿ ಹೆಸರಿನ ಮುಂದೆ 1,2,3 ಅಂಕಿಗಳನ್ನು ಗುರುತು ಹಾಕಿದರೆ ನಿಮ್ಮ ಮತ ಅಸಿಂಧುಗೊಳ್ಳುತ್ತದೆ. ಚುನಾವಣಾಧಿಕಾರಿ ನೀಡಿದ ನೇರಳೆ ಬಣ್ಣದ ಸ್ಕೇಚ್ ಪೆನ್ ಮಾತ್ರ ಬಳಸಿ ಮತ ಚಲಾಯಿಸಿ ಎಂದು ತಿಳಿ ಹೇಳಿದರು.

ಸಭೆಯಲ್ಲಿ ಪುರಸಭೆ ಅಧ್ಯಕ್ಷ ಬಸವರಾಜ ವಂಕೆ, ಉಪಾಧ್ಯಕ್ಷೆ ರಾಜೇಶ್ವರಿ ರಾಜಕುಮಾರ ಮೋರೆ ಸದಸ್ಯರಾದ ಓಂಕಾರ ಮೋರೆ, ಮೆಹಬೂಬಸಾಬ್‌ ಇಸ್ಮಾಯಿಲ್ ಸಾಬ್, ಅನಿತಾ ಧನರಾಜ, ಶಮೀನಾ ಬೇಗಂ, ಫಯೋದ್ದಿನ್, ಮಾಣಿಕಪ್ಪ ರೇಷ್ಮೆ, ಭಾಗ್ಯಶ್ರೀ ಸಂತೋಷ, ಪ್ರವೀಣ ಶ್ರೀಮಂತ, ಲಕ್ಷ್ಮಿ ಶಿವರಾಜ, ಸುಮನಬಾಯಿ ಬಾಬುರಾವ್ ಜಲ್ದೆ, ಬಾಲಾಜಿ ತಗರಖೇಡೆ, ನಾಗನಾಥ ಶಿಂಧೆ, ಶಂಭುಲಿಂಗ ಸ್ವಾಮಿ, ವಿಜಯಕುಮಾರ ರಾಜಭವನ, ಪಾಂಡುರಂಗ ಕನಸೆ, ಶಶಿಕಲಾ ಅಶೋಕ, ಅಂಬಿಕಾ ಧನರಾಜ ಕುಂದೆ, ಅಶೋಕ ಅರ್ಜುನರಾವ್‌, ಶ್ವೇತಾ ವಿಜಯಕುಮಾರ, ಲಲಿತಾಬಾಯಿ ಬಾಬುರಾವ್‌ ಮತ್ತು ನಾಮ ನಿರ್ದೇಶಿತ ಸದಸ್ಯರಾದ ವಿಶ್ವನಾಥರಾವ್‌ ಮೋರೆ, ವಿನೋದಕುಮಾರ ವಿಶ್ವನಾಥ, ಬಿಬಿಶೇನ ಬಿರಾದಾರ, ಕಾವೇರಿ ಶಿವಕಾಂತ ಮಾಶಟ್ಟೆ, ವ್ಯವಸ್ಥಾಪಕಿ ಆಶಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.