ADVERTISEMENT

ವಾಲಿಶ್ರೀ ಆಸ್ಪತ್ರೆ: ಕೋವಿಡ್ ಲಸಿಕಾ ಕೇಂದ್ರ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2021, 17:15 IST
Last Updated 9 ಮಾರ್ಚ್ 2021, 17:15 IST
ಬೀದರ್‌ನ ವಾಲಿಶ್ರೀ ಆಸ್ಪತ್ರೆಯಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಲೀವರ್ ವರ್ಗಾವಣೆ ತಜ್ಞೆ ಡಾ.ಸುಮನಾ ರಾಮಚಂದ್ರ ಕೇಕ್ ಕತ್ತರಿಸಿ ಉದ್ಘಾಟಿಸಿದರು
ಬೀದರ್‌ನ ವಾಲಿಶ್ರೀ ಆಸ್ಪತ್ರೆಯಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಲೀವರ್ ವರ್ಗಾವಣೆ ತಜ್ಞೆ ಡಾ.ಸುಮನಾ ರಾಮಚಂದ್ರ ಕೇಕ್ ಕತ್ತರಿಸಿ ಉದ್ಘಾಟಿಸಿದರು   

ಬೀದರ್: ನಗರದ ವಾಲಿಶ್ರೀ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಲೀವರ್ ವರ್ಗಾವಣೆ ತಜ್ಞೆ ಡಾ. ಸುಮನಾ ರಾಮಚಂದ್ರ ಅವರು ರಕ್ತ ಸಂಗ್ರಹ ಘಟಕ ಹಾಗೂ ಕೋವಿಡ್ ಲಸಿಕಾ ಕೇಂದ್ರವನ್ನು ಉದ್ಘಾಟಿಸಿದರು.

ಇಂದು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಸಾಧನೆಯತ್ತ ದಾಪುಗಾಲು ಇಡಬೇಕು. ತನ್ನ ಅಸ್ತಿತ್ವ ಉಳಿಸಿಕೊಂಡು, ಸ್ವಯಂ ರಕ್ಷಣೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ವಂದೇ ಮಾತರಂ ಶಾಲೆಯ ಪ್ರಾಚಾರ್ಯೆ ರತ್ನಾ ಪಾಟೀಲ ಮಾತನಾಡಿದರು. ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ರಾಜಶೇಖರ ಸೇಡಂಕರ್ ಅಧ್ಯಕ್ಷತೆ ವಹಿಸಿದ್ದರು.

ADVERTISEMENT

ಆಸ್ಪತ್ರೆಯ ನಿರ್ದೇಶಕರಾದ ಡಾ. ವಿ.ವಿ. ನಾಗರಾಜ, ಡಾ. ವೈಜಿನಾಥ ಮದನಾ, ಡಾ. ಪ್ರಸನ್ನ ರೇಷ್ಮೆ, ಸಂಜಯಕುಮಾರ ಮಹಾಗಾಂವ, ಶಂಕರ ಕೆಂಚಾ, ಶ್ರೀನಿವಾಸಗೌಡ, ಪ್ರತಿಮಾ ಅಮಾಜಿ, ಅಂಜನಾ ರಜನೀಶ ವಾಲಿ, ಮಂಗಲಾ ಭಾಗವತ್, ಡಾ. ಆರತಿ ಯೆರಾ, ಡಾ. ಪ್ರೀತಿ ಬಿರಾದಾರ, ಡಾ. ಲಾವಣ್ಯ ಸೋಲಪುರೆ, ಡಾ. ಪ್ರತಿಭಾ, ಸೋನಿಯಾ ನಂದಗೌಳಿ, ಕಲಾವಿದೆ ರಾಣಿ ಸತ್ಯಮೂರ್ತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.