ADVERTISEMENT

ಇರಸವಾಡಿ: ಬಿಎಸ್‌ಪಿ ಸೇರಿದ ಮುಖಂಡರು

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2018, 6:53 IST
Last Updated 30 ಮಾರ್ಚ್ 2018, 6:53 IST

ಸಂತೇಮರಹಳ್ಳಿ: ಸಮೀಪದ ಇರಸವಾಡಿ ಗ್ರಾಮದಲ್ಲಿ ಹಲವು ಮುಖಂಡರು ವಿವಿಧ ಪಕ್ಷಗಳನ್ನು ತೊರೆದು ಬುಧವಾರ ಬಹುಜನ ಸಮಾಜ ಪಕ್ಷಕ್ಕೆ ಸೇರ್ಪಡೆಗೊಂಡರು.

ಬಿಎಸ್‌ಪಿ ರಾಜ್ಯಘಟಕದ ಅಧ್ಯಕ್ಷ ಎನ್. ಮಹೇಶ್ ಪಕ್ಷ ಸೇರ್ಪಡೆಗೊಂಡ ಮುಖಂಡರನ್ನು ಸ್ವಾಗತಿಸಿ ಮಾತನಾಡಿ, ಬಿಎಸ್‌ಪಿ ತತ್ವ ಸಿದ್ಧಾಂತವನ್ನು ಮೆಚ್ಚಿ ಕ್ಷೇತ್ರದಾದ್ಯಂತ ಎಲ್ಲ ಸಮುದಾಯದ ಹಲವು ಮುಂಖಂಡರು ಪಕ್ಷ ಸೇರ್ಪಡೆ ಆಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. 20 ವರ್ಷಗಳಿಂದ ಒಂದೇ ಪಕ್ಷದಲ್ಲಿದ್ದ ಅನೇಕ ಕಾರ್ಯಕರ್ತರನ್ನು ಸೆಳೆಯುವಲ್ಲಿ ಬಿಎಸ್‌ಪಿ ಮುಂದಾಗಿದೆ ಎಂದರು.

ಕೊಳ್ಳೇಗಾಲ ಕ್ಷೇತ್ರವು ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಈ ಭಾಗಕ್ಕೆ ಆಯ್ಕೆಯಾಗಿರುವ ಶಾಸಕರು ಅಭಿವೃದ್ಧಿ ಕೆಲಸಗಳಲ್ಲಿ ಗಮನ ಹರಿಸದಿರುವುದು ಶೋಚನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ತಾಲ್ಲೂಕು ಪಂಚಾಯಿತಿ ಸದಸ್ಯ ನಾಗರಾಜು, ಜಿಲ್ಲಾ ಘಟಕದ ಅಧ್ಯಕ್ಷ ಬಾಗಳಿ ರೇವಣ್ಣ, ಬ್ಲಾಕ್ ಅಧ್ಯಕ್ಷ ಮಲ್ಲೇಶಪ್ಪ, ಗುರುರಾಜಾಚಾರ್, ಜಯಶಂಕರ್, ಉಮ್ಮತ್ತೂರು ಶಿವಣ್ಣ, ರಾಮಶೆಟ್ಟಿ, ಮಹದೇವಯ್ಯ, ಪರ್ವತರಾಜು, ಗಂಗಾಧರ್, ಕೆಂಪರಾಜು, ಶಿವಮ್ಮ ಹಾಜರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.