ADVERTISEMENT

ಕನ್ನಡ ಸಾಹಿತ್ಯ ಸಮ್ಮೇಳನ ಇಂದು

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2011, 9:00 IST
Last Updated 3 ಸೆಪ್ಟೆಂಬರ್ 2011, 9:00 IST

ಗುಂಡ್ಲುಪೇಟೆ : ತಾಲ್ಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಗುಂಡ್ಲುಪೇಟೆ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಸೆಪ್ಟೆಂಬರ್ 3 ರಂದು ಜರುಗಲಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎ.ಎಂ. ನಾಗಮಲ್ಲಪ್ಪ ತಿಳಿಸಿದ್ದಾರೆ.

ಸಮ್ಮೇಳನ ಅಧ್ಯಕ್ಷ ಪಿ.ಸಿ. ರಾಜಶೇಖರ್ ಅವರನ್ನು ಲಕ್ಷ್ಮಿ ವರದರಾಜ ಸ್ವಾಮಿ ದೇವಸ್ಥಾನದಿಂದ ಬಲಚವಾಡಿ ಪುಟ್ಟಬಸಪ್ಪ ಸರ್ಕಾರಿ  ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ನಿರ್ಮಿಸಿರುವ ರಣಧೀರ ಕಂಠೀರವ ಸಭಾ ಮಂಟಪದ ತೆರಕಣಾಂಬಿ ಬೊಮ್ಮರಸ ವೇದಿಕೆಗೆ ವಾದ್ಯಗೋಷ್ಠಿ ಗಳೊಂದಿಗೆ ಕರೆ ತರಲಾಗುವುದು. ಅಂದು ಬೆಳಿಗ್ಗೆ 8 ಗಂಟೆಗೆ ನಡೆಯುವ ಧ್ವಜಾರೋಹಣದಲ್ಲಿ ತಹಶೀಲ್ದಾರ್ ಜಿ.ಎನ್. ಮಂಜುನಾಥ್, ಉಪ ಪ್ರಾಂಶುಪಾಲ ಎಂ.ಪಿ. ಮಂಜಣ್ಣ  ಭಾಗವಹಿಸುವರು.

ಮೆರವಣಿಗೆ ಉದ್ಘಾಟನೆಯನ್ನು ತೆರಕಣಾಂಬಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಟಿ. ರಾಜೇಶ್ ನೆರವೇರಿಸಲಿದ್ದು, ಕಾರ್ಯಕ್ರಮವನ್ನು ಜಿ.ಜಿ. ಮಂಜುನಾಥ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕ ಎಚ್.ಎಸ್. ಮಹದೇವಪ್ರಸಾದ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿ.ಪಂ. ಅಧ್ಯಕ್ಷೆ ಕೆ. ರಾಜೇಶ್ವರಿ, ಜಿ.ಪಂ. ಸದಸ್ಯ ಪಿ. ಮಹಾದೇವಪ್ಪ, ತಾ.ಪಂ. ಅಧ್ಯಕ್ಷೆ ಮಂಗಳಮ್ಮ, ತಾ.ಪಂ. ಸದಸ್ಯೆ ಪ್ರೇಮಾ, ಮಾಜಿ ಸದಸ್ಯೆ ಶೈಲಜಾ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನಿರ್ದೇಶಕರುಗಳಾದ ಆರ್. ಮಹೇಶ್, ಟಿ.ವಿ. ವೆಂಕಟೇಶ್ ಭಾಗವಹಿಸಲಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.