ADVERTISEMENT

ಜನಗಣತಿ: ಸಮರ್ಪಕ ಮಾಹಿತಿ ನೀಡಲು ಮನವಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2011, 10:50 IST
Last Updated 7 ಫೆಬ್ರುವರಿ 2011, 10:50 IST

ಗುಂಡ್ಲುಪೇಟೆ:ಜನಗಣತಿ ಸಂದರ್ಭದಲ್ಲಿ ಅಂಗವಿಲರು ತಮ್ಮ ಅಂಗವೈಕಲ್ಯವನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಲಕ್ಷಕುಮಾರ್ ಶನಿವಾರ ಹೇಳಿದರು.ತಾಲ್ಲೂಕಿನ ಬೇಗೂರು ಗ್ರಾ.ಪಂ. ಕಚೇರಿಯಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ, ರಾಷ್ಟ್ರೀಯ ಅಂಧತ್ವ ನಿವಾರಣಾ ಸಂಸ್ಥೆ, ಗ್ರೀನ್ ಗ್ರಾಮೀಣಾಭಿವೃದ್ಧಿ ಸಂಸ್ಥೆಗಳು ಹಮ್ಮಿಕೊಂಡಿದ್ದ ಜನಗಣತಿ-2011 ಮತ್ತು ಅಂಗವಿಕಲರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಂಗವಿಕಲರು ತಮ್ಮ ಅಂಗವೈಕಲ್ಯ ವನ್ನು ನಮೂದಿಸುವು ದರಿಂದ ಸರ್ಕಾರ ನೀಡುವ ಅನೇಕ ಸೌಲಭ್ಯಗಳನ್ನು ಶೀಘ್ರವಾಗಿ ಪಡೆಯಲು ಸಾಧ್ಯವಾ ಗುತ್ತದೆ. ಕೇಂದ್ರ, ರಾಜ್ಯ ಸರ್ಕಾರ ಮತ್ತು ಸ್ವಯಂ ಸೇವಾ ಸಂಸ್ಥೆಯವರು ಅಂಗವಿಕಲರ ಅಭಿವೃದ್ಧಿಗೆ ಶ್ರಮಿಸು ತ್ತಿವೆ. ಅಂಗವಿಕಲರ ಬಗ್ಗೆ ಸಂಪೂರ್ಣ ಮಾಹಿತಿ ಸಿಗದೆ ಅರ್ಹರು ಸೌಲಭ್ಯ ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ಮತ್ತು ಅಂಗವಿಕಲರಿಗಾಗಿಯೇ ಇರುವ ಯೋಜನೆಗಳು ಸಫಲವಾಗುತ್ತಿಲ್ಲ ಎಂದು ಹೇಳಿದರು.

ಪ್ರಸಕ್ತ ತಿಂಗಳು ಜನಗಣತಿ ಕಾರ್ಯದಲ್ಲಿ ವಿಕಲಚೇತನರು ತಮ್ಮ ಹೆಸರನ್ನು ಕಡ್ಡಾಯವಾಗಿ ನಮೂದಿಸ ಬೇಕು. ಎಸ್‌ಜಿಎಸ್‌ವೈ ಯೋಜನೆಯ ಸಾಲ ಸೌಲಭ್ಯವನ್ನು ಅಂಗವಿಕಲರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬೇಗೂರು ಗ್ರಾ.ಪಂ. ಅಧ್ಯಕ್ಷೆ ರೇಖಾ, ಹೆಚ್ಚುವರಿ ಗ್ರಾಮ ಸಹಾಯಕಿ ಪುಟ್ಟಮ್ಮ, ರಾಷ್ಟ್ರೀಯ ಅಂಧತ್ವ ನಿವಾರಣಾ ಸಂಸ್ಥೆಯ ಸಂಯೋಜಕ ಕೆ. ರಮೇಶ್, ಗ್ರೀನ್ ಸಂಸ್ಥೆಯ ವ್ಯವಸ್ಥಾಪಕ ಪ್ರಭು, ಸಂಪನ್ಮೂಲ ಶಿಕ್ಷಕ ಮಲ್ಲು, ಪರಮೇಶ್,  ಕ್ಷೇತ್ರ ಕಾರ್ಯಕರ್ತರಾದ ಪುಟ್ಟತಾಯಮ್ಮ, ಕೆ.ಎಂ. ಮಹದೇವಪ್ರಸಾದ್, ಡಿ. ಮುದ್ದಮ್ಮ, ಬಿ. ರಾಚಪ್ಪ ಮುಂತಾದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.