ADVERTISEMENT

ಧನಸಹಾಯ: ಸಂಸ್ಥೆಗಳಿಂದ ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 8 ಜೂನ್ 2011, 9:15 IST
Last Updated 8 ಜೂನ್ 2011, 9:15 IST

ಚಾಮರಾಜನಗರ: ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿರುವ ನೋಂದಾಯಿತ ಸಾಮಾನ್ಯ ಸಂಘ-ಸಂಸ್ಥೆಗಳಿಗೆ ಹಾಗೂ ಎಸ್‌ಸಿ/ಎಸ್‌ಟಿ ಮತ್ತು ಸಾಮಾನ್ಯ ವರ್ಗದ ಕಲಾವಿದರಿಗೆ ವಿವಿಧ ಕಾರ್ಯಕ್ರಮಗಳಿಗೆ ಧನ ಸಹಾಯ ನೀಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅರ್ಜಿ ಆಹ್ವಾನಿಸಿದೆ.

ವಿಚಾರ ಸಂಕಿರಣ, ಚಿತ್ರಕಲಾ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕನಿಷ್ಟ 5 ಸಾವಿರದಿಂದ 15 ಸಾವಿರದವರೆಗೂ ಧನ ಸಹಾಯ ನೀಡಲಾಗುವುದು. ಸಂಘ -ಸಂಸ್ಥೆಗಳು ನೋಂದಾಯಿತವಾಗಿದ್ದು, ಮೂರು ವರ್ಷಗಳಲ್ಲಿ ಕ್ರಿಯಾತ್ಮಕವಾಗಿ ಕಾರ್ಯಕ್ರಮ ನಡೆಸಿರಬೇಕು. ಆಸಕ್ತ ಸಂಘ- ಸಂಸ್ಥೆಗಳು ಕಾರ್ಯಕ್ರಮದ ರೂಪುರೇಷೆಗಳನ್ನು ರೂಪಿಸಿಕೊಂಡು ನಿಗದಿತ ಅರ್ಜಿಯಲ್ಲಿ ಹಾಗೂ ಕಾರ್ಯಕ್ರಮಕ್ಕಾಗಿ ಅರ್ಜಿ ಸಲ್ಲಿಸುವ ಕಲಾವಿದರುಗಳು ತಮ್ಮಲ್ಲಿರುವ ಪ್ರಮಾಣ ಪತ್ರ, ಕಲಾವಿದರ ಮಾಹಿತಿ ಇತ್ಯಾದಿ ವಿವರಗಳನ್ನು ನೀಡಿ, ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಚಾಮರಾಜನಗರ ಇಲ್ಲಿಗೆ ಜೂನ್ 30ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಕಳೆದ ಮೂರು ವರ್ಷಗಳಲ್ಲಿ ಧನ ಸಹಾಯ ಪಡೆದ ಸಂಘ-ಸಂಸ್ಥೆಗೆ ಆದ್ಯತೆ ಇರುವುದಿಲ್ಲ. ಪ್ರತಿ ತಾಲ್ಲೂಕು ಸಂಘ-ಸಂಸ್ಥೆಗಳಿಗೆ ಆದ್ಯತೆ ಮೇರೆಗೆ ನಿಯಾಮಾನುಸಾರವಾಗಿ ಧನಸಹಾಯ ನೀಡಲಾಗುವುದು. ಆಸಕ್ತ ಹಾಗೂ ಅರ್ಹ ಕಲಾವಿದರು, ಸಂಘ-ಸಂಸ್ಥೆಗಳು ಕಳೆದ ವರ್ಷಗಳಲ್ಲಿ ಕ್ರಿಯಾತ್ಮಕವಾಗಿ ಕಾರ್ಯಕ್ರಮ ನಡೆಸಿದ್ದರ ದಾಖಲೆಯೊಂದಿಗೆ ಹಾಗೂ ಆಕಾಶವಾಣಿ, ದೂರದರ್ಶನ, ದಸರಾ ಮುಂತಾದ ಕಾರ್ಯಕ್ರಮಗಳಲ್ಲಿ ಭಾವಹಿಸಿದ್ದರ ದಾಖಲೆಗಳ ದೃಢಿ ೀಕರಣದೊಂದಿಗೆ ಸಹಾಯಕರಿಗೆ ಅರ್ಜಿ ಸಲ್ಲಿಸಬೇಕು. ಮಾಹಿತಿಗೆ ದೂ. 08226-222210 ಸಂಪರ್ಕಿಸಲು ಕೋರಲಾಗಿದೆ.

2011-12ನೇ ಸಾಲಿನಲ್ಲಿ ಸಾಂಸ್ಕೃತಿಕ ಸೌರಭ, ಯುವ ಸೌರಭ ಹಾಗೂ ಚಿಗುರು ಕಾರ್ಯಕ್ರಮಗಳನ್ನು ನಡೆಸಲು ವಿವಿಧ ಕಲಾ ಪ್ರಕಾರಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವ ಅರ್ಹ ಕಲಾವಿದರು ಜೂನ್ 30ರೊಳಗೆ ಅರ್ಜಿ ಸಲ್ಲಿಸುವಂತೆ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಮಂಜಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.