ADVERTISEMENT

`ಪೋಲಿಯೊ ನಿರ್ಮೂಲನೆ ರೋಟರಿ ಗುರಿ'

​ಪ್ರಜಾವಾಣಿ ವಾರ್ತೆ
Published 8 ಜುಲೈ 2013, 8:59 IST
Last Updated 8 ಜುಲೈ 2013, 8:59 IST

ಕೊಳ್ಳೇಗಾಲ: `ದೇಶದಲ್ಲಿ ಪೋಲಿಯೊ ನಿರ್ಮೂಲನೆ ರೋಟರಿಯ ಮಹಾನ್ ಸಾಧನೆ' ಎಂದು ರೋಟರಿ ಮಾಜಿ ಗವರ್ನರ್ ಲಕ್ಷ್ಮೀನಾರಾಯಣ್ ತಿಳಿಸಿದರು.

ವಾಸವಿ ಮಹಲ್‌ನಲ್ಲಿ ರೋಟರಿ ಸಂಸ್ಥೆ ಮತ್ತು ಇನ್ನರ್‌ವೀಲ್ ಸಂಸ್ಥೆ ವತಿಯಿಂದ ಭಾನುವಾರ ಏರ್ಪಡಿಸಿದ್ದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸಮುದಾಯದ ಅಗತ್ಯತೆಗಳನ್ನು ಮೊದಲು ಕಂಡುಕೊಂಡು, ನಂತರ ಅವುಗಳನ್ನು ಪೂರೈಸಲು ತಮ್ಮ ಮಾನವಶಕ್ತಿ ಹಾಗೂ ಭೌತಿಕ ಸಂಪನ್ಮೂಲಗಳನ್ನು ಹೇಗೆ ಬಳಸಬೇಕು ಎಂಬುದನ್ನು ರೋಟರಿ ಕ್ಲಬ್‌ಗಳು ನಿರ್ಧರಿಸಲಿವೆ ಎಂದರು.

ನಾವೆಲ್ಲ ರೋಟರಿಗೆ ಸೇರಿರುವುದು ಕ್ರಿಯಾಶೀಲರಾಗಿ, ಬದುಕಿನಲ್ಲಿ ಬದಲಾವಣೆ ತರುವುದಕ್ಕಾಗಿ. ರೋಟರಿ ಸೇವೆ ಹಾಗೂ ಮೌಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ಮಾರ್ಗದಲ್ಲಿ ಹೆಜ್ಜೆ ಇಡಬೇಕಿದೆ ಎಂದರು.

ಅಧ್ಯಕ್ಷರ ಆಯ್ಕೆ
ಇನ್ನರ್‌ವೀಲ್ ಸಂಸ್ಥೆ ಪದಾಧಿಕಾರಿಗಳ ಪದಗ್ರಹಣವನ್ನು ಮಾಜಿ ಅಧ್ಯಕ್ಷೆ ಇಂದ್ರಾಣಿ ನಾಯ್ಡು ಪ್ರತಿಷ್ಠಾಪಿಸಿದರು.
ಇನ್ನರ್‌ವೀಲ್ ನೂತನ ಅಧ್ಯಕ್ಷರಾಗಿ ಗೀತಾಂಜಲಿ ಅವರು ಮಾಜಿ ಅಧ್ಯಕ್ಷೆ ಕರುಣಾಶ್ರೀ ಕಿರಣ್ ಅವರಿಂದ ಅಧಿಕಾರ ವಹಿಸಿಕೊಂಡರು. ರೋಟರಿ ನೂತನ ಅಧ್ಯಕ್ಷರಾಗಿ ಬಿ.ಕೆ. ಪ್ರಕಾಶ್ ಅವರು ಮಾಜಿ ಅಧ್ಯಕ್ಷ ದಿನೇಶ್‌ಗುಪ್ತ ಅವರಿಂದ ಅಧಿಕಾರ ವಹಿಸಿಕೊಂಡರು.

ಪರಿಸರ ಅರಿವು ಜಾಗೃತಿ ಅಂಗವಾಗಿ ಏರ್ಪಡಿಸಿದ್ದ ಚರ್ಚಾಸ್ಪರ್ಧೆ, ಭಾಷಣ ಸ್ಪರ್ಧೆ ಹಾಗೂ ಚಿತ್ರಬಿಡಿಸುವ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು..

ಅಸಿಸ್ಟೆಂಟ್ ಗವರ್ನರ್ ಕೆ.ಎಸ್. ಜಗದೀಶ್ ರೋಟರಿ ವಾಣಿ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿದರು.
ಜೋನಲ್ ಲೆಫ್ಟಿನೆಂಟ್ ಎಂ. ನಂಜುಂಡಯ್ಯ, ಕೆ. ಪುಟ್ಟರಸಶೆಟ್ಟಿ, ನರೇಂದ್ರನಾಥ್, ಕುಮಾರಸ್ವಾಮಿ, ಪಿ. ಈಶ್ವರ್, ಪದ್ಮ ಅನಂತ್, ಪಂಕಜಾ ಶಿವಕುಮಾರ್, ಶೈಲಜಾ ವೀರಭದ್ರಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.