ಕೊಳ್ಳೇಗಾಲ: ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೂ ಕಡ್ಡಾಯವಾಗಿ ಪೋಲಿಯೊ ಲಸಿಕೆ ಹಾಕಿಸಲು ಜನತೆ ಹೆಚ್ಚಿನ ಗಮನ ಹರಿಸಬೇಕು ಎಂದು ರೋಟರಿ ನಿಯೋಜಿತ ಕಾರ್ಯದರ್ಶಿ ನರೇಂದ್ರನಾಥ್ ಮನವಿ ಮಾಡಿದರು.
ಪಟ್ಟಣದ ರೋಟರಿ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ 2ನೇ ಸುತ್ತಿನ ಪೋಲಿಯೊ ಲಸಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಂತರರಾಷ್ಟ್ರೀಯ ರೋಟರಿ ಸಂಸ್ಥೆ ಕಳೆದ 23 ವರ್ಷಗಳ ನಿರಂತರ ಪರಿಶ್ರಮ ಹಾಗೂ ಸರ್ಕಾರದ ಸಹಕಾರದಿಂದ ಭಾರತದಲ್ಲಿ ಈ ವರ್ಷ ಈ ವರೆಗೂ ಒಂದು ಪೋಲಿಯೊ ಪ್ರಕರಣ ಪತ್ತೆಯಾಗದಿರುವ ಕಾರಣ ಭಾರತ ಪೋಲಿಯೊ ಮುಕ್ತರಾಷ್ಟ್ರ ಎನಿಸಿದೆ.
ರೋಟರಿ ಜ್ಲ್ಲಿಲಾ ತರಬೇತುದಾರ ಕೆ. ಪುಟ್ಟರಸಶೆಟ್ಟಿ ಮಾತನಾಡಿ, ಪೋಷಕರು ತಮ್ಮ ಐದು ವರ್ಷದೊಳಗಿನ ಮಕ್ಕಳಿಗೆ ಈಗಾಗಲೇ ಎಷ್ಟು ಬಾರಿ ಲಸಿಕೆ ಹಾಕಿಸಿದ್ದರೂ ಸಹ ಈ ಬಾರಿಯೂ ಹಾಕಿಸಬೇಕು ಎಂದು ಮನವಿ ಮಾಡಿದರು. ಟಿ.ಜಾನ್‌ಪೀಟರ್, ಶಿವಣ್ಣ, ಆರೋಗ್ಯ ಸಹಾಯಕಿಯರು ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.