ADVERTISEMENT

`ಬಾಯಿಬೀಗ' ಹರಕೆ ಸಲ್ಲಿಸಿದ ಭಕ್ತರು

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 7:14 IST
Last Updated 4 ಏಪ್ರಿಲ್ 2013, 7:14 IST
ಕೊಳ್ಳೇಗಾಲ ತಾಲ್ಲೂಕಿನ ಹನೂರಿನ ಬೆಟ್ಟಳ್ಳಿ ಮಾರಮ್ಮ ಜಾತ್ರೆಯ ಮೂರನೇ ದಿನ ನಡೆದ ಬಾಯಿಬೀಗ ಕಾರ್ಯಕ್ರಮದಲ್ಲಿ ಹರಕೆಹೊತ್ತ ಭಕ್ತರು ಬಾಯಿಬೀಗ ಹಾಕಿಸಿಕೊಂಡು ಮೆರವಣಿಯಲ್ಲಿ ಸಾಗಿದರು.
ಕೊಳ್ಳೇಗಾಲ ತಾಲ್ಲೂಕಿನ ಹನೂರಿನ ಬೆಟ್ಟಳ್ಳಿ ಮಾರಮ್ಮ ಜಾತ್ರೆಯ ಮೂರನೇ ದಿನ ನಡೆದ ಬಾಯಿಬೀಗ ಕಾರ್ಯಕ್ರಮದಲ್ಲಿ ಹರಕೆಹೊತ್ತ ಭಕ್ತರು ಬಾಯಿಬೀಗ ಹಾಕಿಸಿಕೊಂಡು ಮೆರವಣಿಯಲ್ಲಿ ಸಾಗಿದರು.   

ಕೊಳ್ಳೇಗಾಲ: ತಾಲ್ಲೂಕಿನ ಹನೂರು ಪಟ್ಟಣದಲ್ಲಿ ಬೆಟ್ಟಳ್ಳಿ ಮಾರಮ್ಮ ಜಾತ್ರೆ ಅಂಗವಾಗಿ ಬುಧವಾರ ನಡೆದ ಬಾಯಿಬೀಗ ಕಾರ್ಯಕ್ರಮದಲ್ಲಿ ಅಪಾರ ಭಕ್ತರು ಪಾಲ್ಗೊಂಡಿದ್ದರು.

ಪಟ್ಟಣದ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ 60ಕ್ಕೂ ಹೆಚ್ಚು ಭಕ್ತರು 15ರಿಂದ 25 ಅಡಿ ಉದ್ದದ ಸರಳಿನ ಬಾಯಿಬೀಗ ಮತ್ತು ಸಾವಿರಾರು ಭಕ್ತರು ಸಣ್ಣಬಾಯಿಬೀಗ ಹಾಕಿಸಿಕೊಂಡು ಮೆರವಣಿಗೆಯಲ್ಲಿ ಪಾಲ್ಗೊಂಡು ಹರಕೆ ತೀರಿಸಿದರು.

ಬೆಳಿಗ್ಗೆಯೇ ಆಂಜನೇಯ ದೇವಾಲ ಯದಲ್ಲಿ ಜಮಾಯಿಸಿದ್ದ ಭಕ್ತರು ತಣ್ಣಿರು ಸ್ನಾನ ಮಾಡಿದರು. ಬಳಿಕ ಕೋಳಿಯ ರಕ್ತದ ತಿಲಕವಿಟ್ಟು ಕೊಂಡರು. ಅರಿಸಿಣ ಮಿಶ್ರಿತ ನೀರನ್ನು ಭಕ್ತರ ತಲೆಯ ಮೇರೆ ಸುರಿಯಲಾ ಯಿತು. ಸರಳಿನ ಬಾಯಿಬೀಗ ಹಾಕಿಸಿಕೊಂಡು ಭಕ್ತರ ಮೆರವಣಿಗೆ ವೀಕ್ಷಿಸಲು ರಸ್ತೆಯ ಇಕ್ಕೆಲಗಳಲ್ಲೂ ಜನಜಮಾಯಿಸಿದ್ದರು.  ಮುಖ್ಯ ಬೀದಿ, ಬಸ್ ನಿಲ್ದಾಣದ ಮೂಲಕ ಮೆರವಣಿಗೆ ದೇವಾಲಯ ತಲುಪಿತು.

ಬಾಯಿಬೀಗ ಕಾರ್ಯಕ್ರಮದಲ್ಲಿ ಕರ್ನಾಟಕ, ತಮಿಳುನಾಡಿನ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸುತ್ತಾರೆ. ಈ ಬಾರಿ ಸಾಕಷ್ಟು ಸಂಖ್ಯೆಯಲ್ಲಿ ಜನರಿದ್ದ ಕಾರಣ ಪೊಲೀಸರು ಹೆಣಗಾಡಬೇಕಾದ ಸ್ಥಿತಿ ನಿರ್ಮಾಣ ವಾಗಿತ್ತು. ದೇವಸ್ಥಾನಕ್ಕೆ ಭಕ್ತರು ನಗದು, ಬೆಳ್ಳಿ, ಚಿನ್ನ, ಕೋಳಿ, ಕುರಿ ಕಾಣಿಕೆ ಸಲ್ಲಿಸಿದರು.

ಹನೂರು ಪಟ್ಟಣ ಪ್ರಮುಖ ಬೀದಿಗಳಲ್ಲಿ ಜನಸಾಗರ ತುಂಬಿ ತುಳುಕುತ್ತಿದ್ದು, ಎಲ್ಲೆಲ್ಲೂ ಸಂಭ್ರಮ, ಸಡಗರ ನೆಲೆಯೂರಿತ್ತು. ದೇವಾಲಯದಲ್ಲಿ ಭಕ್ತರಿಗೆ ಬೆಳಗಿನ ತಿಂಡಿ ಮತ್ತು ಮಧ್ಯಾಹ್ನ ಅನ್ನಸಂತ ರ್ಪಣೆಯ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.