ADVERTISEMENT

ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕಾರ್ಮಿಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2012, 7:50 IST
Last Updated 22 ಅಕ್ಟೋಬರ್ 2012, 7:50 IST

ಚಾಮರಾಜನಗರ: ಸರ್ಕಾರದ ಸವಲತ್ತು ದೊರೆಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಗಾರೆ ಕಾರ್ಮಿಕರ ಹಾಗೂ ಸಹ ಗಾರೆ ಕಾರ್ಮಿಕರ ಅಭಿವೃದ್ಧಿ ಸಮಿತಿ ಶನಿವಾರ ಪ್ರತಿಭಟನೆ ನಡೆಸಿದರು.

ಚಾಮರಾಜೇಶ್ವರ ದೇವಸ್ಥಾನದಿಂದ ಮೆರವಣಿಗೆ ಹೊರಟ ಸಂಘದ ಸದಸ್ಯರ ಜಿಲ್ಲಾಡಳಿತ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದರು. ಗಾರೆ ಕಾರ್ಮಿಕರ ಸಂಘ ನೋಂದಣಿಯಾಗಿ 5 ವರ್ಷ ಕಳೆದಿದೆ ಇಂದಿಗೂ ಸರ್ಕಾರದಿಂದ ಸಿಗುವಂತ ಸೌಲಭ್ಯಗಳು ಸಿಗುತ್ತಿಲ್ಲ. ಕಾರ್ಮಿಕರ ಒಳಿತಿಗಾಗಿ ಸಂಘ ರಚನೆಯಾಗಿದೆ ಹೊರತು ಸಭೆ, ಸಮಾರಂಭಗಳಿಗೆ ಹಾಗೂ ಸಂಘದ  ಸಮಸ್ಯೆ, ಕಷ್ಟ-ಸುಖಗಳನ್ನು ಚರ್ಚಿಸಲು ಸರ್ಕಾರ ಒಂದು ನಿವೇಶನ ನೀಡಿಲ್ಲ ಎಂದು ದೂರಿದರು.

ಕಾರ್ಮಿಕ ಇಲಾಖೆ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಜೊತೆಗೆ, ಸಿಗುವಂತ ಸೌಲಭ್ಯಗಳ ಬಗ್ಗೆ ಇಲಾಖೆ ಮಾಹಿತಿ ನೀಡತ್ತಿಲ್ಲ. ಇಲಾಖೆಯವರು ವಿನಾಕಾರಣ ಕಾರ್ಮಿಕರಿಗೆ ಕಿರುಕುಳ ನೀಡುತ್ತಿರುವುದು ಹೆಚ್ಚಾಗಿದ್ದು, ಕೂಡಲೇ, ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದೆ.

ಅನೇಕ ಬಾರಿ ನಗರ ಸಭೆ ಮತ್ತು ಜನಪ್ರತಿನಿಧಿಗಳ ಮೂಲಕ ನಮ್ಮ ಬೇಡಿಕೆ ಈಡೆರಿಕೆಗೆ ಮನವಿ ಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ, ಕಾರ್ಮಿಕರಿಗೆ ಸಿಗಬೇಕಾ ಗಿರುವ ಸವಲತ್ತು ಮತ್ತು ಇತರೆ ಮಾಹಿತಿಯನ್ನು ನೀಡಲು ತಕ್ಷಣವೇ ಕಾರ್ಮಿಕರ ಸಭೆ ಕರೆದು ಚರ್ಚಿಸಬೇಕು ಎಂದು ಕೋರಿದರು.

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಸಿ.ಎನ್.ಗೋವಿಂದರಾಜು, ಗುರು ಸ್ವಾಮಿ, ರಾಜೇಶ್, ಶಿವಶಂಕರ, ಎಸ್.ಎನ್.ಉಮೇಶ್, ಗಂಗಾಧರ, ಚಿಕ್ಕಬಸವಣ್ಣ ಪಾಲ್ಗೋಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.