ADVERTISEMENT

ಮನರಂಜಿಸಿದ ವಿದ್ಯಾರ್ಥಿಗಳ ನೃತ್ಯ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2012, 8:40 IST
Last Updated 7 ಏಪ್ರಿಲ್ 2012, 8:40 IST

ಗುಂಡ್ಲುಪೇಟೆ: ಪಟ್ಟಣದ ಗುರುಭವನದಲ್ಲಿ ಶನಿವಾರ ಸಂಜೆ ವಿವಿಧ ವರ್ಣಮಯ ಬೆಳಕಿನ ನಡುವೆ ವಿವಿಧ ಗೀತೆಗಳಿಗೆ ಆಕರ್ಷಕ ನೃತ್ಯ ಮಾಡಿದ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳು ಸಾರ್ವಜನಿಕರ ಮೆಚ್ಚುಗೆ ಗಳಿಸಿದರು.

ಪಟ್ಟಣದ ವಿ.ಎಸ್. ಚಾರಿಟಬಲ್ ಟ್ರಸ್ಟ್‌ನ ಆದರ್ಶ ವಿದ್ಯಾಲಯದ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಹಮ್ಮಿ ಕೊಂಡಿದ್ದ ಪದವಿ ಪ್ರದಾನ ಸಮಾರಂಭ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರನ್ನು ಆಕರ್ಷಿಸಿದವು.

ಆಂಗ್ಲ ಭಾಷೆಯ `ನ್ಯೂಹಿ ಟ್ವಿಸ್ಟ್~ ಹಾಡಿಗೆ ಪುಟಾಣಿಗಳು ಹೆಜ್ಜೆ ಹಾಕಿ ಪ್ರೇಕ್ಷಕರನ್ನು ಮೂಕವಿಸ್ಮಿತ ರನ್ನಾಗಿ ಮಾಡಿದವು. `ಪ್ರೇಮ್ ಕಿ ನಯ್ಯಾ~ ಎಂಬ ಹಿಂದಿ ಹಾಡಿಗೆ ನರ್ತಿಸಿದ ಪುಟಾಣಿಗಳು ತಮ್ಮ ವೇಷಭೂಷಣದಿಂದ ಪ್ರೇಕ್ಷಕರ ಮನಸೂರೆಗೊಳ್ಳು ವಂತೆ ಮಾಡಿದವು. ರಾಧೆಯ ಕೃಷ್ಣ ಎಂಬ ಹಾಡುಗಳಿಗೆ ನೃತ್ಯ ಮಾಡಿ ತುಂಟ ಕೃಷ್ಣನ ವೇಷ ಧರಿಸಿದ್ದ ಸೌರವ್ ಆರ್. ಗೌಡ ಪ್ರೇಕ್ಷಕರ ಮೆಚ್ಚುಗೆ ಗಳಿಸಿದನು.

ಪ್ರತಿ ವರ್ಷ ನಡೆಯುವ ಈ ಪದವಿ ಪ್ರದಾನ ಸಮಾರಂಭದಲ್ಲಿ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳು ಗೌನು ಹಾಕಿಕೊಂಡು ಪದವಿ ಪತ್ರವನ್ನು ಪಡೆದು ಸಂತಸ ಹಂಚಿ ಕೊಂಡರು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪೋಷಕರು ಶಿಕ್ಷಕರೊಡನೆ ಬೆರೆತು ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿ ಹಾಗೂ ವಿವಿಧ ಕ್ಷೇತ್ರದ ಬಗ್ಗೆ ತಮ್ಮ ಮಕ್ಕಳ ಅಭಿರುಚಿಯ ಕುರಿತು ಮಾತನಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಮಲ್ಲಿಕಾರ್ಜುನ್, ಶಿಕ್ಷಣ ಸಂಯೋಜಕ ಯೋಗೇಂದ್ರನ್, ಜೆಎಸ್‌ಎಸ್ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಚ್.ಪಿ. ಬಸವರಾಜಪ್ಪ, ಕಾರ್ಯದರ್ಶಿ ಮುಕುಂದ್, ಮುಖ್ಯ ಶಿಕ್ಷಕಿ ಗೀತಾ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.