ADVERTISEMENT

ಮೊದಲ ದಿನ ಗ್ರಾಮೀಣರಿಗೆ ಹಾಲಿಲ್ಲ!

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2013, 10:44 IST
Last Updated 2 ಆಗಸ್ಟ್ 2013, 10:44 IST

ಚಾಮರಾಜನಗರ: ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್)ದಿಂದ ಹಾಲಿನ ಪುಡಿ ಪೂರೈಕೆಯಲ್ಲಿ ಆಗಿರುವ ವ್ಯತ್ಯಯದ ಪರಿಣಾಮ ಜಿಲ್ಲೆಯ ಗ್ರಾಮೀಣ ಪ್ರದೇಶದ ಸರ್ಕಾರಿ ಹಾಗೂ ಅನುದಾನಿತ ಶಾಲೆಯ ವಿದ್ಯಾರ್ಥಿಗಳು ಮೊದಲ ದಿನ `ಕ್ಷೀರ ಭಾಗ್ಯ' ಯೋಜನೆಯಿಂದ ವಂಚಿತರಾದರು.

ಜಿಲ್ಲೆಯಲ್ಲಿ 860 ಸರ್ಕಾರಿ ಮತ್ತು 76 ಅನುದಾನಿತ ಶಾಲೆಗಳಿವೆ. ಒಟ್ಟು 1,01,823 ಮಕ್ಕಳಿಗೆ ತಲಾ 18 ಗ್ರಾಂ. ಹಾಲಿನ ಪುಡಿ ಬಳಸಿಕೊಂಡು 150 ಮಿ.ಲೀ. ಹಾಲು ನೀಡಲಾ ಗುತ್ತದೆ. ಇದಕ್ಕಾಗಿ ರಾಜ್ಯ ಸರ್ಕಾರ ಪ್ರತಿಯೊಬ್ಬ ವಿದ್ಯಾರ್ಥಿಗೆ ರೂ 4.69 ವೆಚ್ಚ ಮಾಡುತ್ತಿದೆ. ಜಿಲ್ಲೆಗೆ ಒಟ್ಟು ತಿಂಗಳಲ್ಲಿ 12 ದಿನಗಳಂತೆ ಹಾಲು ವಿತರಿಸಲು 8,882 ಕೆಜಿ ಹಾಲಿನ ಪುಡಿಯ ಅಗತ್ಯವಿದೆ.

75 ಶಾಲೆಗಳಿಗೆ ಒಂದು ಬ್ಲಾಕ್‌ನಂತೆ ಕೆಎಂಎಫ್‌ನಿಂದ ಹಾಲಿನ ಪುಡಿ ಪೂರೈಸಲಾಗುತ್ತಿದೆ. ಜಿಲ್ಲಾ ಕೇಂದ್ರ ಸೇರಿದಂತೆ ಎಲ್ಲ ತಾಲ್ಲೂಕು ಕೇಂದ್ರ, ಪಟ್ಟಣ ಪ್ರದೇಶದಲ್ಲಿ ಮಕ್ಕಳಿಗೆ ಮೊದಲ ದಿನವೇ ಹಾಲು ವಿತರಿಸಲಾ ಗಿದೆ. ಆದರೆ, ಗ್ರಾಮೀಣ ಶಾಲೆಗಳಿಗೆ ಹಾಲಿನ ಪುಡಿ ಪೂರೈಕೆಯಲ್ಲಿ ವ್ಯತ್ಯಯ ವಾಗಿದೆ. ಹೀಗಾಗಿ, ಗ್ರಾಮೀಣ ಶಾಲೆಗಳಲ್ಲಿ ಹಾಲು ವಿತರಿಸಿಲ್ಲ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾ ಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಗುರುವಾರ ಸಂಜೆ ವೇಳೆಗೆ ಬಹುತೇಕ ಗ್ರಾಮೀಣ ಪ್ರೀಶದ ಎಲ್ಲ ಶಾಲೆಗಳಿಗೆ ಹಾಲಿನ ಪುಡಿ ಪೂರೈಕೆ ಯಾಗಿದೆ. ಶುಕ್ರವಾರ ಮಕ್ಕಳಿಗೆ ಹಾಲು ವಿತರಿಸಲಾಗುವುದು. ನಿಯ ಮಿತವಾಗಿ ವಾರದ ಸೋಮವಾರ, ಬುಧವಾರ, ಶುಕ್ರವಾರ ಮಕ್ಕಳಿಗೆ ಹಾಲು ವಿತರಿಸಲು ಕ್ರಮಕೈಗೊಳ್ಳ ಲಾಗುವುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.