ADVERTISEMENT

ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿ

ಡಾ.ಸೈಯದ್ ಹಿದಾಯತ್ ಉಲ್ಲಾ ಮನವಿ

​ಪ್ರಜಾವಾಣಿ ವಾರ್ತೆ
Published 15 ಜೂನ್ 2018, 11:01 IST
Last Updated 15 ಜೂನ್ 2018, 11:01 IST

ಕೊಳ್ಳೇಗಾಲ: ರಕ್ತದಾನಕ್ಕೆ ಜೀವದಾನದ ಶಕ್ತಿ ಇದೆ. ಹೀಗಾಗಿ, ಯುವ ಸಮುದಾಯ ಹಾಗೂ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಬೇಕು ಎಂದು ಡಾ.ಸೈಯದ್ ಹಿದಾಯತ್ ಉಲ್ಲಾ ಮನವಿ ಮಾಡಿದರು.

ನಗರದ ಮಾನಸ ಶಿಕ್ಷಣ ಸಂಸ್ಥೆ, ಜೆಎಸ್‍ಬಿ ಪ್ರತಿಷ್ಠಾನ, ರೋಟರಿ ಸಂಸ್ಥೆ, ಭಾರತ್ ವಿಕಾಸ ಪರಿಷತ್ ಸಂಯುಕ್ತಾಶ್ರಯದಲ್ಲಿ ಗುರುವಾರ ಮಾನಸ ಕ್ಯಾಂಪಸ್ ಆವರಣದಲ್ಲಿ ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಆಯೋಜಿಸಿದ್ದ ರಕ್ತದಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾವಿನ ಜೂತೆ ಹೋರಾಡುವ ವ್ಯಕ್ತಿಗಳನ್ನು ಬದುಕಿಸಿ ಪ್ರಾಣಾಪಾಯದಿಂದ ಪಾರು ಮಾಡುವಲ್ಲಿ ರಕ್ತದಾನ ಬಹಳ ಮುಖ್ಯವಾಗಿದೆ. ಅಪಘಾತ ಸಂಭವಿಸಿದಾಗ ಹಾಗೂ ಹೃದಯ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಹೆಚ್ಚಾಗಿರುತ್ತದೆ ಎಂದರು.

ADVERTISEMENT

ಭಾರತ್ ವಿಕಾಸ ಪರಿಷತ್ ಅಧ್ಯಕ್ಷ ಡಿ. ವೆಂಕಟಾಚಲ ಮಾತನಾಡಿ, ‘ರಕ್ತದಾನ ಮಾಡುವುದರಿಂದ ಮತ್ತಷ್ಟು ಆರೋಗ್ಯ ಹೆಚ್ಚುತ್ತದೆ. ರಕ್ತದಾನದಿಂದ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ. ಹೀಗಾಗಿ, ಪ್ರತಿಯೊಬ್ಬರೂ ರಕ್ತದಾನ ಮಾಡುವ ಪ್ರತಿಜ್ಞೆ ಕೈಗೊಳ್ಳಬೇಕು. ಅನೇಕ ಜೀವಗಳನ್ನು ಉಳಿಸಬೇಕು’ ಮನವಿ ಮಾಡಿದರು.

ರೋಟರಿ ಸಂಸ್ಥೆ ನಿಯೋಜಿತ ಅಧ್ಯಕ್ಷೆ ಪ್ರೇಮಲತಾ ಕೃಷ್ಣಸ್ವಾಮಿ, ಜೆಎಸ್‍ಬಿ ಪ್ರತಿಷ್ಠಾನದ ಅಧ್ಯಕ್ಷ ಶಶಿಕುಮಾರ್, ರೋಟರಿ ಸಂಸ್ಥೆ ಮಾಜಿ ಸಹಾಯಕ ಗವರ್ನರ್ ಕೆ. ಪುಟ್ಟರಸಶೆಟ್ಟಿ, ಮಾನಸ ಶಿಕ್ಷಣ ಸಂಸ್ಥೆ ಸಂಯೋಜನಾಧಿಕಾರಿ ರಾಮಕೃಷ್ಣ, ನಟರಾಜು, ಪ್ರಾಂಶುಪಾಲ ಅಶ್ವತ್ಥ ನಾರಾಯಣ್ ಮೊದಲಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.