ADVERTISEMENT

ಹೂಳು ತುಂಬಿದ ಚರಂಡಿ!

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 9:06 IST
Last Updated 19 ಡಿಸೆಂಬರ್ 2012, 9:06 IST

ಕೊಳ್ಳೇಗಾಲ: ಇಲ್ಲಿ ರಸ್ತೆಯಲ್ಲೇ ಚರಂಡಿ ನೀರು ಹರಿಯು ತ್ತಿದೆ. ಕುಡಿಯುವ ನೀರು ಸರಬರಾಜು ಟ್ಯಾಂಕ್ ಸ್ಮಾರಕ ದಂತಾಗಿವೆ. ಚರಂಡಿಗಳಲ್ಲಿ ಹೂಳು ತುಂಬಿದೆ. ಕುಡಿಯುವ ನೀರಿಗೆ ಪರದಾಟ.

ಇದು ಪಟ್ಟಣದ ಕೂಗಳತೆಯ ಲಿಂಗಾಣಪುರ ಗ್ರಾಮದ ಸಮಸ್ಯೆಗಳು. ನಗರಸಭೆ ವ್ಯಾಪ್ತಿಗೆ ಸೇರಿದ ಲಿಂಗಣಾಪುರ ಗ್ರಾಮ ದುಸ್ಥಿತಿಯಲ್ಲಿದೆ. ಚರಂಡಿ ಸ್ವಚ್ಛತೆ ಇಲ್ಲದೇ ರಾತ್ರಿ ವೇಳೆ ಸೊಳ್ಳೆ ಕಾಟ ವಿಪರೀತವಾಗಿದೆ. ಗ್ರಾಮದ ಬೋರ್‌ವೆಲ್‌ಗಳು ಮತ್ತು ಕುಡಿಯುವ ನೀರಿನ ಕಿರುನೀರು ಸರಬರಾಜು ತೊಂಬೆಗಳಿಗೆ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಈ ತೊಂಬೆಗಳಲ್ಲಿ ನೀರು ತುಂಬುವುದೇ ಅಪರೂಪ.

ಕೆಲವು ಬೀದಿಗಳಲ್ಲಿ ಸ್ವಚ್ಛತೆ ಮತ್ತು ಸಮರ್ಪಕ ಚರಂಡಿ ಇಲ್ಲದ ಕಾರಣ ರಸ್ತೆಯ ಮಧ್ಯಭಾಗದಲ್ಲಿ ನೀರು ಹರಿಯುತ್ತದೆ. ಇದರಿಂದ ಸಾರ್ವಜನಿಕರು ಓಡಾಡಲು ಪ್ರಯಾಸಪಡಬೇಕು.

ಗ್ರಾಮದ ಕೆಲವು ರಸ್ತೆಗಳನ್ನು ಇನ್ನೂ ನಿರ್ಮಿಸಿಲ್ಲ. ಗ್ರಾಮದ ರಸ್ತೆ ಹದಗೆಟ್ಟಿದೆ. ಇಲ್ಲಿನ ರಸ್ತೆಗಳಿಗೆ ಕಾಯಕಲ್ಪ ಕೊಡುವ ಕೆಲಸ ಇನ್ನೂ ಆಗಿಲ್ಲ. ಈ ವಾರ್ಡ್ ಸದಸ್ಯ ಜಿ.ಸೆಲ್ವರಾಜ್ ಪ್ರತಿನಿತ್ಯ ಮುಂಜಾನೆಯಾಗುತ್ತಿದ್ದಂತೆಯೇ ಇಲ್ಲಿಗೆ ಭೇಟಿ ನೀಡಿ ರಸ್ತೆಗುಡಿಸುವ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಅನುದಾನದ ಕೊರತೆಯಿಂದ ರಸ್ತೆ ಮತ್ತಿತರ ಕೆಲಸಗಳನ್ನು ಮಾಡಲು ಸಾಧ್ಯವಾಗಿಲ್ಲ ಮುಂದಿನ ದಿನಗಳಲ್ಲಿ ಕ್ರಮವಹಿಸುವಂತೆ ಅಧಿಕಾರಿಗಳ ಗಮನ ಸೆಳೆದಿರುವುದಾಗಿ ತಿಳಿಸಿದ್ದಾರೆ.

ಗ್ರಾಮ ರಸ್ತೆಗಳನ್ನು ಡಾಂಬರೀಕರಣ ಮಾಡಬೇಕು, ಚರಂಡಿಗಳನ್ನು ನಿರ್ಮಿಸಿ ಕುಡಿಯುವ ನೀರುಪೂರೈಸಲು ನಗರಸಭೆ ಕ್ರಮವಹಿಸಲಿ ಎಂಬುದು ಗ್ರಾಮದ ನಂಜುಂಡ ಅವರ ದೂರು.
ಡಿ.ವೆಂಕಟಾಚಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.