ಚಾಮರಾಜನಗರ: ಮಹಿಳೆಯೊಬ್ಬರ ಅಂಡಾಶಯದಲ್ಲಿ ಬೆಳೆದಿದ್ದ7 ಕೆ.ಜಿ ತೂಕದ ಗೆಡ್ಡೆಯನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ. ನವೀನ್‌ಚಂದ್ರ ಅವರು ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಯಳಂದೂರು ತಾಲ್ಲೂಕಿನ ಅವಲ್ ಕಂದಹಳ್ಳಿ(ಎ.ಕಂದಹಳ್ಳಿ)ಯ ಮಹದೇವಮ್ಮ (55)ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರತಿದಿನ ಕಾಡುತ್ತಿದ್ದ ನೋವಿನಿಂದ ಮುಕ್ತಿ ಹೊಂದಿ ಆರೋಗ್ಯವಾಗಿದ್ದಾರೆ.
ಗೆಡ್ಡೆಗೆ ಹಾನಿಯಾಗದಂತೆ ಮತ್ತು ರಕ್ತಸ್ರಾವ ಆಗದಂತೆ ಅತ್ಯಂತ ಸುರಕ್ಷಿತ ರೀತಿಯಲ್ಲಿಶಸ್ತ್ರಚಿಕಿತ್ಸೆ ಮಾಡುವುದು ಕಷ್ಟ. ಇದನ್ನು ನಿರ್ವಹಿಸುವುದು ಸಾಮಾನ್ಯ. ಜಾಗರೂಕತೆ ಮತ್ತು ತಾಳ್ಮೆಯಿಂದ ಸುಮಾರು ಅರ್ಧಗಂಟೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿ, ಗೆಡ್ಡೆಯನ್ನು ಹೊರತೆಗೆಯಲಾಯಿತು ಎನ್ನುತ್ತಾರೆ ವೈದ್ಯರು.ಶಸ್ತ್ರ ಚಿಕಿತ್ಸೆ ವೇಳೆಅರಿವಳಿಕೆ ತಜ್ಞ ಡಾ. ಮಹೇಶ್, ಪದ್ಮ ತಂಡದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.