ADVERTISEMENT

ಜಿಲ್ಲೆಯಲ್ಲಿ 20 ಮಿ.ಮೀ ಮಳೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2019, 14:51 IST
Last Updated 17 ಆಗಸ್ಟ್ 2019, 14:51 IST
ಶನಿವಾರ ಬೆಳಿಗ್ಗೆ ಮಳೆ ಸುರಿಯುತ್ತಿದ್ದರಿಂದ ಜನರು ಛತ್ರಿಯನ್ನು ಅವಲಂಬಿಸಬೇಕಾಯಿತು
ಶನಿವಾರ ಬೆಳಿಗ್ಗೆ ಮಳೆ ಸುರಿಯುತ್ತಿದ್ದರಿಂದ ಜನರು ಛತ್ರಿಯನ್ನು ಅವಲಂಬಿಸಬೇಕಾಯಿತು   

ಚಾಮರಾಜನಗರ: ಜಿಲ್ಲೆಯಾದ್ಯಂತ ಶುಕ್ರವಾರ ಸಂಜೆಯಿಂದ ಶನಿವಾರ ಬೆಳಿಗ್ಗೆಯವರೆಗೂ ಜಿಟಿ ಜಿಟಿ ಮಳೆಯಾಗಿದೆ. 24 ಗಂಟೆಗಳಲ್ಲಿ ಸರಾಸರಿ 20 ಮಿ.ಮೀ ಮಳೆ ಬಿದ್ದಿದೆ.

ಚಾಮರಾಜನಗರ ತಾಲ್ಲೂಕಿನಲ್ಲಿ 14 ಮಿ.ಮೀ, ಕೊಳ್ಳೇಗಾಲದಲ್ಲಿ 22 ಮಿ.ಮೀ ಗುಂಡ್ಲುಪೇಟೆಯಲ್ಲಿ 19 ಮಿ.ಮೀ ಹಾಗೂ ಯಳಂದೂರು ತಾಲ್ಲೂಕಿನಲ್ಲಿ 24 ಮಿ.ಮೀ ಮಳೆ ಸುರಿದಿದೆ.

ಸಂಜೆ ಆರು ಗಂಟೆಯ ನಂತರ ಆರಂಭವಾದ ಮಳೆ ಶನಿವಾರ ಬೆಳಿಗ್ಗೆ 9.30ರವರೆಗೆ ಬರುತ್ತಲೇ ಇತ್ತು. ಬೆಳಿಗ್ಗೆ ಶಾಲೆಗೆ ತೆರಳುವ ಮಕ್ಕಳು ಹಾಗೂ ಕಚೇರಿಗೆ ತೆರಳುವ ಉದ್ಯೋಗಿಗಳಿಗೆ ಸ್ವಲ್ಪ ತೊಂದರೆಯಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.