ಸಂತೇಮರಹಳ್ಳಿ: ಸಮೀಪದ ಕುದೇರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2023–24ನೇ ಸಾಲಿನ ವಾರ್ಷಿಕ ಮಹಾ ಸಭೆ ಭಾನುವಾರ ನಡೆಯಿತು.
ಸಂಘದ ಅಧ್ಯಕ್ಷ ವಸುಪಾಲ್ ಮಾತನಾಡಿ, ಸಂಘದ ಎಲ್ಲ ನಿರ್ದೇಶಕರು ಹಾಗೂ ಸದಸ್ಯರ ಸಹಕಾರದಿಂದ ಸಂಘವು ಉತ್ತಮವಾಗಿ ನಡೆಯುತ್ತಿದೆ. ಕಳೆದ ಸಾಲಿನಲ್ಲಿ ಸಂಘಕ್ಕೆ ₹ 28 ಸಾವಿರ ಲಾಭಾಂಶ ದೊರಕಿದೆ. ಈಗಾಗಲೇ 78 ಸದಸ್ಯರು ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಹಂತ ಹಂತವಾಗಿ ಎಲ್ಲ ಸದಸ್ಯರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು. ಸಾಲ ಪಡೆದ ಸದಸ್ಯರು ಸಕಾಲದಲ್ಲಿ ಸಾಲ ಮರು ಪಾವತಿ ಮಾಡಬೇಕು. ಇಲ್ಲದಿದ್ದರೇ ಶೇ 14ರಷ್ಟು ಬಡ್ಡಿ ಕಟ್ಟಬೇಕಾಗುತ್ತದೆ. ಈಗಾಗಲೇ 400 ಮಂದಿಗೆ ₹ 5 ಕೋಟಿ ಸಾಲ ನೀಡಲಾಗಿದೆ ಎಂದರು.
ಸಂಘವು ಶಿಥಿಲವಾದ ಕಟ್ಟಡದಲ್ಲಿ ನಡೆಯುತಿತ್ತು. ಹಿಂದೆ ಸಹಕಾರ ಸಚಿವರಾಗಿದ್ದ ಎಚ್.ಎಸ್.ಮಹದೇವಪ್ರಸಾದ್ ಅವರು ₹ 10 ಲಕ್ಷ ಬಿಡುಗಡೆಗೊಳಿಸಿದ್ದರು. ಅದರ ಜತೆಗೆ ₹5.60 ಲಕ್ಷದೊಂದಿಗೆ ಕಚೇರಿ ಕಟ್ಟಡ ನಿರ್ಮಿಸಲಾಯಿತು. ಆಹಾರ ವಿತರಣೆ ಮಾಡುವ ಕಟ್ಟಡವನ್ನು ₹ 53 ಲಕ್ಷದಲ್ಲಿ ನಿರ್ಮಿಸಲಾಗಿದೆ. ಸಂಘಕ್ಕೆ ಬಂದ ಲಾಭಾಂಶದಲ್ಲಿ ಕಟ್ಟಡ ನಿರ್ಮಾಣದ ಖರ್ಚುಗಳನ್ನು ವಿನಿಯೋಗಿಸಲಾಗುತ್ತಿದೆ ಎಂದು ತಿಳಿಸಿದರು.
ಸಂಘದ ಉಪಾಧ್ಯಕ್ಷ ಎಂ.ಮಹದೇವಯ್ಯ, ನಿರ್ದೇಶಕರಾದ ಕೆ.ಎಂ.ರಾಜೇಂದ್ರಸ್ವಾಮಿ, ಎಸ್.ಶಿವಶಂಕರ್, ವೈ.ಪಿ.ಸತೀಶ್, ಎಂ.ಶಿವಣ್ಣ, ಮಹದೇವಪ್ಪ, ಕೆ.ವಿ.ವೃಷಬೇಂದ್ರಸ್ವಾಮಿ, ಮಹದೇವಯ್ಯ, ರತ್ನಮ್ಮ, ಪ್ರೇಮಾ, ಅನಿಲ್ ಕುಮಾರ್, ಮುಖ್ಯ ನಿರ್ವಹಣಾಧಿಕಾರಿ ಟಿ.ಮಹೇಶ್, ಸಹಾಯಕ ಬಿ.ಮಹೇಶ್, ಅಟೆಂಡರ್ ಕೆ.ಪಿ.ಹುಚ್ಚಪ್ಪ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.