ಗುಂಡ್ಲುಪೇಟೆ: ಮದ್ಯಪಾನ ತ್ಯಜಿಸುವುದರಿಂದ ಒಳ್ಳೆಯ ಜೀವನ ನಡೆಸಲು ಸಾಧ್ಯ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೈಸೂರು ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಮುಕೇಶ್ ಅಭಿಪ್ರಾಯಪಟ್ಟರು.
ಪಟ್ಟಣದ ಶನೇಶ್ಚರ ದೇವಾಲಯ ಸಮುದಾಯ ಭವನದಲ್ಲಿ ನಡೆದ ನವಜೀವನ ತಾಲ್ಲೂಕು ಸಮಿತಿ ಸದಸ್ಯರ ನವ ಜೀವನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮದ್ಯವರ್ಜನ ಶಿಬಿರದಲ್ಲಿ ಪಾಲ್ಗೊಂಡು ಜೀವನದಲ್ಲಿ ಬದಲಾವಣೆ ಮಾಡಿಕೊಂಡು ಉತ್ತಮ ಜೀವನ ನಡೆಸುತ್ತಿರುವ ನವ ಜೀವನ ಸಮಿತಿ ಸದಸ್ಯ ಸಮಾಜಕ್ಕೆ ಮಾದರಿ’ ಎಂದು ತಿಳಿಸಿದರು.
‘ನವಜೀವನ ಸಮಿತಿ ಎಲ್ಲರೂ ಸಮಾಜ ಕಂಟಕವಾಗಿರುವ ಮದ್ಯವರ್ಜನೆಗೆ ಪ್ರೇರಣೆ ನೀಡಬೇಕು. ನಮ್ಮ ಸಂಸ್ಥೆ ವತಿಯಿಂದ ನಡೆಸುವ ಎಲ್ಲಾ ಕಾರ್ಯಕ್ರಮಗಳಲ್ಲೂ ನವಜೀವನ ಸಮತಿಯವರು ಪಾಲ್ಗೊಳ್ಳಿ’ ಎಂದು ಸಲಹೆ ನೀಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲ್ಲೂಕು ಯೋಜನಾಧಿಕಾರಿ ಚಂದ್ರಶೇಖರ ಮಾತನಾಡಿ, ‘ತಾಲ್ಲೂಕಿನಲ್ಲಿ ನವಜೀವನ ಸಮಿತಿ ಸದಸ್ಯರ ಸಂಖ್ಯೆ ದುಪ್ಪಟ್ಟಾಗಬೇಕು. ನಾವು ನಡೆಸುವ ಪ್ರತಿ ಮದ್ಯವರ್ಜನ ಶಿಬಿರದಲ್ಲಿ ಪಾಲ್ಗೊಂಡು ಪಾನಮುಕ್ತರಾದ ಎಲ್ಲಾ ಸದಸ್ಯರನ್ನು ಸಮಿತಿಗೆ ಸೇರಿಸಿಕೊಳ್ಳಬೇಕು’ ಎಂದರು.
ಶನೇಶ್ಚರ ದೇವಾಲಯ ಸಮಿತಿ ಸದಸ್ಯರಾದ ಶಿವಪ್ಪ, ಜವರೇಗೌಡ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾದೇಶಿಕ ವಿಭಾಗದ ಮೇಲ್ವಿಚಾರಕಿ ವಸಂತಾ, ಕೆಲಸೂರು ಮತ್ತು ಗುಂಡ್ಲುಪೇಟೆ ವಲಯ ಮೇಲ್ವಿಚಾರಕರಾದ ಆದರ್ಶ್ ಮಂಜುನಾಥ, ನವಜೀವನ ಸಮಿತಿ ಪೋಷಕರ, ನವಜೀವನ ಸಮಿತಿ ಸದಸ್ಯರ ಕುಟುಂಬದ ಸದಸ್ಯರು ಹಾಜರಿದ್ದರು.
Quote - ಕುಡಿತದ ಸಂದರ್ಭದಲ್ಲಿ ಕುಟುಂಬ ಗ್ರಾಮ ಸಮಾಜ ಪ್ರತಿಯೊಬ್ಬರಿಂದಲೂ ತಿರಸ್ಕಾರಕ್ಕೆ ಒಳಗಾಗಿದ್ದವರು ಮದ್ಯವರ್ಜನ ಶಿಬಿರದಲ್ಲಿ ಪಾಲ್ಗೊಂಡು ನವ ಜೀವನ ನಡೆಸಿ ಹೆಚ್ಚಿನ ಗೌರವ ಪಡೆಯುತ್ತಿದ್ದಾರೆ ಮುಕೇಶ್ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೈಸೂರು ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.