ಗುಂಡ್ಲುಪೇಟೆ: ಕಾಡು ಹಂದಿಗಳ ದಾಳಿಯಿಂದ ಬಾಳೆ ಬೆಳೆ ನಾಶವಾಗಿರುವ ಘಟನೆ ತಾಲ್ಲೂಕಿನ ಹೂರದಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹೂರದಹಳ್ಳಿ ಗ್ರಾಮದ ಕೆ.ಮಹೇಶ್ ಎಂಬ ರೈತನ ಬಾಳೆ ಫಸಲಿನ ಮೇಲೆ ಕಾಡು ಹಂದಿಗಳ ಹಿಂಡು ದಾಳಿ ನಡೆಸಿ ತಿಂದು, ತುಳಿದು ನಾಶ ಮಾಡಿವೆ. ಇದರಿಂದ ರೈತ ನಷ್ಟ ಅನುಭವಿಸುವಂತಾಗಿದೆ. ಕಾಡು ಹಂದಿ ನಾಶ ಮಾಡಿದ ಜಾಗಕ್ಕೆ ಮತ್ತೆ ಕಂದು ನಾಟಿ ಮಾಡಿದರೂ ಪ್ರಯೋಜನ ಆಗುವುದಿಲ್ಲ. ಗ್ರಾಮ ವ್ಯಾಪ್ತಿಯಲ್ಲಿ ಕಾಡುಹಂದಿಗಳು ಹಿಂಡುಗಳಲ್ಲಿ ರೈತರ ಜಮೀನುಗಳಿಗೆ ಲಗ್ಗೆ ಇಡುತ್ತಿವೆ.
ಬೆಳೆ ನಾಶ ನಿರಂತರವಾಗಿದ್ದು, ರೈತರ ನಷ್ಟ ಅನುಭವಿಸುವುದು ಮುಂದುವರಿದಿದೆ. ಆದ್ದರಿಂದ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.